More

  ವಿವೇಕಾನಂದರ ಜೀವನ ಚರಿತ್ರೆ ಓದಿ

  ಕುಶಾಲನಗರ: ವಿವೇಕಾನಂದರ ಜೀವನ ಚರಿತ್ರೆ ಭಾರತದ ಸಂಸ್ಕೃತಿಯ ಕನ್ನಡಿ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಟಿ.ಎಲ್.ತ್ಯಾಗರಾಜು ಅಭಿಪ್ರಾಯಪಟ್ಟರು.

  ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ದಿನಾಚರಣೆಯಲ್ಲಿ ಮಾತನಾಡಿದರು.

  ಭಾರತದ ಸಂಸ್ಕೃತಿಯನ್ನು ತಿಳಿಯಬೇಕೆಂದರೆ ವಿವೇಕಾನಂದರ ಜೀವನ ಚರಿತ್ರೆ ಓದಬೇಕು. ಆಗಮಾತ್ರ ಭವ್ಯ ಭಾರತದ ಚಿತ್ರಣ ಮತ್ತು ನಿರ್ಮಾಣ ಹೇಗೆ ಎಂದು ಅರಿವಿಗೆ ಬರುತ್ತದೆ ಎಂದರು.

  ಪ್ರಾಂಶುಪಾಲ ಪ್ರೋ.ಲಿಂಗಮೂರ್ತಿ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ವಸಂತಕುಮಾರಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಸುರೇಂದ್ರ ಮತ್ತು ಕಾವೇರಪ್ಪ, ಉಪನ್ಯಾಸಕರಾದ ಕಾಶಿಕುಮಾರ್, ಸುರೇಶ್ ಕುಮಾರ್, ಹರ್ಷ, ಪುಟ್ಟರಾಜು, ಪಾವನಿ, ದೈಹಿಕ ಶಿಕ್ಷಣ ನಿರ್ದೇಶಕಿ ಪೂವಮ್ಮ, ಅನಂದ್ ಮತ್ತು ರೇವು ನಾಯಕ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts