ಆತ್ಮವಿಶ್ವಾಸ, ಪರಿಶ್ರಮದಿಂದ ಗುರಿ ಮುಟ್ಟಿ: ಜಿ.ಪಂ. ಸಿಇಒ ಕೆ.ಎಂ. ಗಾಯತ್ರಿ

blank

ಮೈಸೂರು: ವಿದ್ಯಾರ್ಥಿಗಳು ಕಾಲೇಜು ದಿನಗಳನ್ನು ಓದಿಗೆ ಮಾತ್ರ ಮೀಸಲಿಟ್ಟು, ಆತ್ಮವಿಶ್ವಾಸ ಹಾಗೂ ಪರಿಶ್ರಮದಿಂದ ಗುರಿ ಮುಟ್ಟಬೇಕು. ಆ ಮೂಲಕ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ನೀವೇ ನಿರ್ಧರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದರು.
ಕುವೆಂಪುನಗರದ ಬಿ.ಸಿ.ಎಂ. ಹಾಸ್ಟೆಲ್ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾ ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ ಆಯೋಜಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಈಗಿರುವಷ್ಟು ಸೌಲಭ್ಯಗಳು ಇಲ್ಲದಿದ್ದರೂ ಸಹ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಓದಿದ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಷಯವನ್ನು ಸಂಗ್ರಹಿಸಿಕೊಂಡು ನಿಮ್ಮದೇ ಆದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್, ಟಿ.ವಿ., ಹೊರಗೆ ಸುತ್ತಾಡುವ ಆಕರ್ಷಣೆಯಿಂದ ದೂರವಿದ್ದು, 3 ರಿಂದ 4 ವರ್ಷ ಕಷ್ಟಪಟ್ಟು ಓದಿದರೆ ನಿಮ್ಮ ಬದುಕಿನ ದಿಕ್ಕೆ ಬದಲಾವಣೆಯಾಗುತ್ತದೆ. ನಿಮ್ಮ ತಂದೆ, ತಾಯಿ ಕನಸನ್ನು ಕಟ್ಟಿಕೊಂಡು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ನಿಲಯ ಪಾಲಕರು, ಅಧಿಕಾರಿಗಳು ನಿಮ್ಮ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರ ಕನಸು, ಶ್ರಮಕ್ಕೆ ಬೆಲೆ ನೀಡಬೇಕು. ಬಿ.ಸಿ.ಎಂ. ಹಳೆಯ ವಿದ್ಯಾರ್ಥಿ ಸಂಘ ನಿಮ್ಮ ಭವಿಷ್ಯ ರೂಪಿಸಲು ಕಾರ್ಯಾಗಾರವನ್ನು ಮಾಡುತ್ತಿದ್ದಾರೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ಜಿಲ್ಲಾ ಬಿ.ಸಿ.ಎಂ. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮಾತನಾಡಿ, ಹಿರಿಯರ ಸಲಹೆ ಮೇರೆಗೆ ಸಂಘವನ್ನು ಸ್ಥಾಪನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಹೀಗಾಗಿ ಸಂಘದ ಮೂಲ ಆಶಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಅರಿತು ಈ ಕಾರ್ಯಾಗಾರವನ್ನು ಮಾಡಲಾಗುತ್ತಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಂಕ ಕಡಿಮೆ ಬಂದಿದೆ ಎಂದು ಹತಾಶರಾಗಬಾರದು, ದುಃಖಪಡಬಾರದು. ಭಯ, ಆತಂಕ ಬಿಟ್ಟು ಮರಳಿಯತ್ನ ಮಾಡಿದರೆ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂದು ತಿಳಿಸಿದರು.
ಹಠ, ಛಲ, ಧೈರ್ಯ ನಿಮಗಿದ್ದರೆ ಯಾವ ಪರೀಕ್ಷೆ ಬೇಕಾದರೂ ಎದುರಿಸಬಹುದು. ತಂದೆ, ತಾಯಿ ನಿಮ್ಮ ಮೇಲೆ ಭರವಸೆ ಇಟ್ಟು ಓದಲು ಕಳುಹಿಸಿದ್ದಾರೆ. ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳೆಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಆಗೀದ್ದೀರಿ. ನಾನು ಕೂಡ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಯಾಗಿ ಶ್ರಮಪಟ್ಟು ಓದಿದ್ದರಿಂದ ಶಿಕ್ಷಕನಾಗಿ, ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಅಗಿ ಈಗ ಕೆಎಎಸ್ ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಸಂಪನ್ಮೂಲ ವ್ಯಕ್ತಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಎ.ಎಸ್. ರವಿ ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳು 2 ವರ್ಷ ತಪಸ್ಸು ಮಾಡಬೇಕು. ನಾನು ಪರೀಕ್ಷೆ ಬರೆಯಬೇಕು ಎಂಬ ಮನಸ್ಥಿತಿ ಇರಬೇಕು. ನಾನು ಸಮರ್ಥನಿದ್ದೇನೆ ಎಂದು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಮೆಡಿಕಲ್, ಇಂಜಿನಿಯರಿಂಗ್ ಸೀಟ್ ಸಿಗಲಿಲ್ಲ ಎಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಜೀವನವನ್ನು ರೂಪಿಸಿಕೊಳ್ಳಲು ಬಹಳಷ್ಟು ಕೋರ್ಸುಗಳು ಇವೆ. ಎನ್‌ಎಸ್‌ಡಿಸಿ ವೆಬ್‌ಸೈಟ್ ನೀಡಿದರೆ ಅದರಲ್ಲಿ 600 ಕೋರ್ಸ್‌ಗಳು ಇದ್ದು, ನಿಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಓದಿ ಗುರಿ ಸಾಧಿಸಿ ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ಹುಣಸೂರು ತಾಲೂಕು ತಹಸೀಲ್ದಾರ್ ಮಂಜುನಾಥ್, ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ಸಿಂಡಿಕೇಟ್ ಸದಸ್ಯ ಮಹೇಶ್ ಸೋಸಲೆ, ಅಹಿಂದ ಜವರಪ್ಪ, ಬ್ಯಾಡ್ರಳ್ಳಿ ನಂದೀಶ, ಸಂಘದ ಕಾರ್ಯದರ್ಶಿ ಬಿ.ಪಿ. ರಾಜೇಶ್, ಖಜಾಂಚಿ ರುಕ್ಮಾಂಗದ, ನಿಲಯಪಾಲಕರಾದ ಜಗದೀಶ್ ಕೋರಿ, ನಾಗರಾಜ್ ವಡ್ಗಲ್, ಡಾ.ಜಗದೀಶ್, ನವೀನ್ ಇತರರು ಇದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…