More

    1ರಿಂದ 5ರ ವರೆಗಿನ ತರಗತಿ ಆರಂಭಿಸಿ: ಆನ್​ಲೈನ್​ ಸಮೀಕ್ಷೆಯಲ್ಲಿ ಪಾಲಕರ ಒಲವು

    ಬೆಂಗಳೂರು: ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ತೆರೆಯಬೇಕೇ, ಬೇಡವೇ ಎಂಬ ಬಗ್ಗೆ ಆಲೋಚನೆ ನಡೆಯುತ್ತಿರುವ ಮಧ್ಯೆಯೇ ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಶಾಲೆ ತೆರೆಯುವುದು ಮುಖ್ಯವೆಂದು ಶೇ.80 ಪಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

    ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದ ಫೆಲೋ ಡಾ.ವಿ.ಪಿ. ನಿರಂಜನಾರಾಧ್ಯ, ಡಾ. ಶ್ರೀನಿವಾಸ ಕಕ್ಕಿಲಯ, ಗುರು ಕಾಶಿನಾಥ್ ಅವರ ತಂಡ ‘ಮಕ್ಕಳ ನಡೆ ಶಾಲೆಯ ಕಡೆ’ ಎಂಬ ಶೀರ್ಷಿಕೆ ಅಡಿ ಆನ್‌ಲೈನ್ ಮೂಲಕ ಸಾರ್ವಜನಿಕರು, ಪಾಲಕರು, ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ಈ ಸಮೀಕ್ಷೆಗೆ ಒಳಪಟ್ಟ 2,973 ಜನರ ಪೈಕಿ 2,443 (ಶೇ.80) ಮಂದಿ ಶಾಲೆ ತೆರೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಮೀಕ್ಷೆಯಲ್ಲಿ ಭಾಗವಹಿಸಿದ್ದ 2,973 ಜನರ ಪೈಕಿ 1,823 ಗ್ರಾಮೀಣ ಮತ್ತು 1,034 ನಗರ ಪ್ರದೇಶದವರು. ಕಿರಿಯ ಪ್ರಾಥಮಿಕ ಶಾಲೆ ತೆರೆಯಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆಗೆ 530 ಬೇಡ ಎಂದು ಹಾಗೂ 2,443 ಬೇಕು ಎಂದು ಉತ್ತರಿಸಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಜನರಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ವಾಸಿಸುವ 1,546 ಜನರು ತಕ್ಷಣ ಆರಂಭಿಸುವುದು ಉತ್ತಮ ಎಂದಿದ್ದಾರೆ.

    ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಆಗಲಿದೆ ಅಲ್ಲೋಲ-ಕಲ್ಲೋಲ!; ಕುತೂಹಲ ಮೂಡಿಸಿದೆ ಕಾಲಜ್ಞಾನ ಹೇಳಿಕೆ

    ಇನ್ನು ಶಾಲೆ ತೆರೆದಿದ್ದರೂ ಸಹ ಈವರೆಗೆ ತರಗತಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಬದಲು ಆಹಾರ ಧಾನ್ಯಗಳನ್ನೇ ನೀಡಲಾಗುತ್ತಿದೆ. ಇಂತಹ ವೇಳೆಯಲ್ಲಿ ಬಹುತೇಕ ಪಾಲಕರು ಮಧ್ಯಾಹ್ನದ ಬಿಸಿಯೂಟವನ್ನೇ ನೀಡಬೇಕು, ಜತೆಗೆ ಎಂದಿನಂತೆ ಕ್ಷೀರ ಭಾಗ್ಯದ ಯೋಜನೆ ಅಡಿ ಹಾಲು ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲು ಮತ್ತು ಬಿಸಿಯೂಟ ನೀಡಬೇಕೇ ಅಥವಾ ಬೇಡವೇ ಎಂದು ಪ್ರಶ್ನಿಸಿದಾಗ 529 ಜನರು ಬೇಡ ಮತ್ತು 2,444 ಜನರು ಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

    ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts