ಆರ್​​ಡಿಎಕ್ಸ್​​ ಸ್ಫೋಟಗೊಂಡು ಬಾಗಲಕೋಟೆಯ ಯೋಧ ಹುತಾತ್ಮ

ಬಾಗಲಕೋಟೆ: ಆರ್​​​ಡಿಎಕ್ಸ್​​ ಸ್ಫೋಟಗೊಂಡ ಪರಿಣಾಮ ಬಾಗಲಕೋಟೆ ಜಿಲ್ಲೆಯ ಯೋಧ ಹುತಾತ್ಮನಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ರೆಜೋರಿಯಲ್ಲಿ ನಡೆದಿದೆ.

ಶ್ರೀಶೈಲ್ ರಾಯಪ್ಪ ಬಳಬಟ್ಟಿ (34) ಹುತಾತ್ಮ ಯೋಧ. ಬಾಗಲಕೋಟೆಯ ಇಲಾಳ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಯೋಧನ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಹುತಾತ್ಮ ಯೋಧ ಬಳಬಟ್ಟಿ 12ನೇ ಮದ್ರಾಸ್​​​ ಇನ್​ಪ್ರೆಂಟಿ ರೆಜಿಮೆಂಟ್​​ನಲ್ಲಿ ಯೋಧನಾಗಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *