ಆರ್​ಸಿಬಿ ಗೆಲುವಿನ ನಂತರ ವಿರಾಟ್​ ಕೊಹ್ಲಿಗೆ ಎಬಿ ಡಿವಿಲಿಯರ್ಸ್​​ ನೀಡಿದ ಮುದ್ದಾದ ಹೆಸರು ಇದು…!

ನವದೆಹಲಿ: ಭಾರತ ತಂಡದ ನಾಯಕ, ಸದ್ಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಮುನ್ನಡೆಸುತ್ತಿರುವ ವಿರಾಟ್​ ಕೊಹ್ಲಿಗೆ ಈಗಾಗಲೇ ತುಂಬ ನಿಕ್​ನೇಮ್​ಗಳಿದ್ದು ಈಗ ದಕ್ಷಿಣಾಫ್ರಿಕಾ ತಂಡದ ಪ್ರಸಿದ್ಧ ಬ್ಯಾಟ್ಸ್​ಮೆನ್​ ಎಬಿ ಡಿವಿಲಿಯರ್ಸ್​​ ಇನ್ನೊಂದು ಹೆಸರಿಟ್ಟಿದ್ದಾರೆ.

ಡೇಂಜರಸ್​ ಬ್ಯಾಟ್ಸ್​ಮನ್​ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್​​ ಕೂಡ ಐಪಿಎಲ್​ನಲ್ಲಿ ಆರ್​ಸಿಬಿ ತಂಡದಲ್ಲಿ ಆಡುತ್ತಾರೆ. ಶುಕ್ರವಾರ ಈಡನ್​ ಗಾರ್ಡನ್​ನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಗೆದ್ದ ಪಂದ್ಯಾವಳಿಯಲ್ಲಿ ವಿರಾಟ್​ ಕೊಹ್ಲಿ, 100 ರನ್​ ಗಳಿಸಿ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ಖುಷಿಗೊಂಡ ಎಬಿ ಡಿವಿಲಿಯರ್ಸ್​​ ಕೊಹ್ಲಿಯನ್ನು ಹೊಗಳಿದ್ದಲ್ಲದೆ ಅವರಿಗೊಂದು ಚಂದನೆಯ ಹೆಸರು ಕೊಟ್ಟಿದ್ದಾರೆ.

ವಿರಾಟ್​ ಕೊಹ್ಲಿಯನ್ನು ಭಾರತ ತಂಡದ ಆಟಗಾರರು ಚೀಕು ಎಂದು ಕರೆಯುತ್ತಾರೆ. ಅದಲ್ಲದೆ ರನ್​ ಮಷಿನ್​, ಕಿಂಗ್​ ಕೊಹ್ಲಿ, ಚೇಸ್​ ಮಾಸ್ಟರ್​ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಆದರೆ ಈಗ ಎಬಿ ಡಿವಿಲಿಯರ್ಸ್​​ ಸ್ವಲ್ಪ ವಿಭಿನ್ನವಾಗಿ ವಿರಾಟ್​ ಕೊಹ್ಲಿಯವರನ್ನು ‘ ಲಿಟ್ಲ್​ ಬಿಸ್ಕತ್​’ ಎಂದಿದ್ದಾರೆ. ಕೊಹ್ಲಿಯನ್ನು ಇದೇ ಹೆಸರಿನಲ್ಲಿ ಉಲ್ಲೇಖಿಸಿ ಟ್ವೀಟ್​ ಮಾಡಿ ಹೊಗಳಿದ್ದಾರೆ. ಅಭಿಮಾನಿಗಳು ಕೂಡ ಈ ನಿಕ್​ನೇಮ್​ನಿಂದ ಫುಲ್​ ಖುಷಿಯಾಗಿದ್ದಲ್ಲದೆ ಈಗಾಗಲೇ 8.8 ಸಾವಿರಗಳಷ್ಟು ರೀಟ್ವೀಟ್​ ಆಗಿದೆ.

ಶುಕ್ರವಾರ ಕೆಕೆಆರ್​ ವಿರುದ್ಧದ ಪಂದ್ಯಾವಳಿಯಲ್ಲಿ ಆರ್​ಸಿಬಿ 10 ರನ್​ಗಳ ಅಂತರದಲ್ಲಿ ಗೆದ್ದಿತ್ತು.