WPL: ಗೆಲುವಿನೊಂದಿಗೆ ಆರ್‌ಸಿಬಿ ಅಭಿಯಾನ ಅಂತ್ಯ: ನೇರವಾಗಿ ಫೈನಲ್‌ಗೇರಿದ ಡೆಲ್ಲಿ ಕ್ಯಾಪಿಟಲ್ಸ್

blank

ಮುಂಬೈ: ನಾಯಕಿ ಸ್ಮೃತಿ ಮಂದನಾ (53 ರನ್, 6 ಬೌಂಡರಿ, 3 ಸಿಕ್ಸರ್) ಅರ್ಧಶತಕ ಹಾಗೂ ಕೊನೆಯಲ್ಲಿ ಜಾರ್ಜಿಯಾ ವೇರ್‌ಹ್ಯಾಂ (31* ರನ್, 10 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನಾಟದ ನೆರವಿನಿಂದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 11 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಸ್ಮತಿ ಮಂದನಾ ಪಡೆ ಟೂರ್ನಿಯಲ್ಲಿ 4ನೇ ಸ್ಥಾನಿಯಾಗಿ ಅಭಿಯಾನ ಮುಗಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಸತತ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೇರಿದೆ. ಗುರುವಾರ ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ೈನಲ್ ಹಂತಕ್ಕೇರಲು ಹೋರಾಡಲಿವೆ.

ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿಗೆ ಆರಂಭಿಕರಾದ ಎಸ್. ಮೇಘನಾ (26) ಹಾಗೂ ಸ್ಮತಿ ಮಂದನಾ ಉತ್ತಮ ಆರಂಭ ಒದಗಿಸಿದರು. ಕೊನೇ ಐದು ಓವರ್‌ಗಳಲ್ಲಿ 70 ರನ್ ಕಸಿದ ಆರ್‌ಸಿಬಿ ಅಂತಿಮವಾಗಿ 3 ವಿಕೆಟ್‌ಗೆ 199 ರನ್ ಕಲೆಹಾಕಿತು. ಪ್ರತಿಯಾಗಿ ಸ್ನೇಹಾ ರಾಣಾ (26ಕ್ಕೆ 3) ಬಿಗಿ ಬೌಲಿಂಗ್‌ಗೆ ನಲುಗಿದ ಮುಂಬೈ, ನ್ಯಾಟ್ ಸೀವರ್ ಬ್ರಂಟ್ (69 ರನ್, 35 ಎಸೆತ, 9 ಬೌಂಡರಿ, 2 ಸಿಕ್ಸರ್) ಅಬ್ಬರದ ನಡುವೆಯೂ 9 ವಿಕೆಟ್‌ಗೆ 188 ರನ್‌ಗಳಿಸಲಷ್ಟೇ ಶಕ್ತಗೊಂಡಿತು.

ಪೆರ‌್ರಿ ಎಸೆದ ಅಂತಿಮ ಓವರ್‌ನಲ್ಲಿ 28 ರನ್ ಅಗತ್ಯವಿದ್ದಾಗ ಸಜೀವನ್ ಸಜನಾ 2 ಸಿಕ್ಸರ್ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಈ ಮೂಲಕ ಹರ್ಮಾನ್‌ಪ್ರೀತ್ ಕೌರ್ ಪಡೆ ನೇರವಾಗಿ ೈನಲ್ ಅರ್ಹತೆ ಅವಕಾಶ ತಪ್ಪಿಸಿಕೊಂಡಿತು.

ಆರ್‌ಸಿಬಿ: 3 ವಿಕೆಟ್‌ಗೆ 199 (ಎಸ್. ಮೇಘನಾ 26, ಸ್ಮತಿ ಮಂದನಾ 53, ಎಲ್ಲಿಸ್ ಪೆರ‌್ರಿ 49*, ರಿಚಾ ೋಷ್ 36, ಜಾರ್ಜಿಹ್ಯಾ ವೇರ್‌ಹ್ಯಾಂ 31*, ಅಮೆಲಿಯಾ ಕೆರ್ 47ಕ್ಕೆ 1, ಹ್ಯಾಲ್ಯೆ ಮ್ಯಾಥ್ಯೂಸ್ 37ಕ್ಕೆ 2).

ಮುಂಬೈ ಇಂಡಿಯನ್ಸ್: 9 ವಿಕೆಟ್‌ಗೆ 188 (ಹ್ಯಾಲೆ ಮ್ಯಾಥ್ಯೂಸ್ 19, ಅಮೆಲಿಯಾ 9, ಸೀವರ್ ಬ್ರಂಟ್ 69, ಹರ್ಮಾನ್‌ಪ್ರೀತ್ 20, ಅಮನ್‌ಜೋತ್ 17, ಯಸ್ತಿಕಾ 4, ಸಜನಾ 23, ಸಂಸ್ಕೃತಿ 10, ಕಮಲಿನಿ 6, ಕಿಮ್ ಗಾರ್ತ್ 33ಕ್ಕೆ2, ಸ್ನೇಹಾರಾಣಾ 26ಕ್ಕೆ 3, ಎಲ್ಲಿಸ್ ಪೆರ‌್ರಿ 53ಕ್ಕೆ 2).

Share This Article

ಪೀಚ್​ ಹಣ್ಣು ತಿನ್ನುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು! | Peaches

Peaches : ಪೀಚ್‌ಗಳು ತುಂಬಾ ಆರೋಗ್ಯಕರವಾಗಿದ್ದು, ಇದನ್ನು ತಿನ್ನುವುದರಿಂದ ಉತ್ತಮ ಆರೋಗ್ಯ ಲಭಿಸುವುದರ ಜತೆಗೆ ದೇಹಕ್ಕೆ…

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…