ಹೊಸ -ರೂ. 100 ನೋಟು!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) -ಠಿ; 100ರ ಹೊಸ ನೋಟನ್ನು ಸಧ್ಯದಲ್ಲೇ ಬಿಡುಗಡೆ ಮಾಡಲಿದೆ. ಇವುಗಳು ನೇರಳೆ (ಲ್ಯಾವೆಂಡರ್) ಬಣ್ಣದಲ್ಲಿ ಇರಲಿವೆ. ಪ್ರಸ್ತುತ ಇರುವ 100ರ ನೋಟುಗಳೂ ಚಲಾವಣೆಯಲ್ಲಿ ಮುಂದು ವರಿಯಲಿವೆ ಎಂದು ಆರ್​ಬಿಐ ತಿಳಿಸಿದೆ. ಹೊಸ ನೋಟಿನ ಒಂದು ಪಾರ್ಶ್ವದಲ್ಲಿ ಗಾಂಧಿ ಚಿತ್ರವಿದ್ದರೆ, ಮತ್ತೊಂದು ಪಾರ್ಶ್ವ ದಲ್ಲಿ ‘ರಾಣಿ ಕಿ ವಾವ್’ (ಕಲಾತ್ಮಕ ಕಲ್ಯಾಣಿ) ಚಿತ್ರ ಇರಲಿದೆ. ಗುಜರಾತ್​ನ ಪಠಾಣ್ ಜಿಲ್ಲೆಯ ಸರಸ್ವತಿ ನದಿ ದಂಡೆಯಲ್ಲಿ ಇಂತಹ ಕುಸರಿ ಕಲೆ ಕೆತ್ತನೆಯ ಐತಿಹಾಸಿಕ ಕಲ್ಯಾಣಿಗಳು ಇವೆ.