ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಶಕ್ತಿಕಾಂತ್​ ದಾಸ್​ ನೇಮಕ

ನವದೆಹಲಿ: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ(ಆರ್​ಬಿಐ)ದ ಗವರ್ನರ್​ ಆಗಿ ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಶಕ್ತಿಕಾಂತ್​ ದಾಸ್​ ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್​ಬಿಐ ಗವರ್ನರ್​ ಆಗಿದ್ದ ಊರ್ಜಿತ್​ ಪಟೇಲ್​ ಸೋಮವಾರ ರಾಜೀನಾಮೆ ಸಲ್ಲಿಸಿ ತಕ್ಷಣ ಮಾನ್ಯಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಶಕ್ತಿಕಾಂತ್​ ದಾಸ್​ ಅವರು ಭಾರತದ ಹಣಕಾಸು ಆಯೋಗದ ಸದಸ್ಯರು ಹಾಗೂ ಜಿ-20 ಶೃಂಗಸಭೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸ್ಥಾನಕ್ಕೆ 2017ರಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ನಿವೃತ್ತ ಐಎಎಸ್​ ಅಧಿಕಾರಿಯೂ ಆಗಿರುವ ದಾಸ್​ ಮೊದಲು ಕೇಂದ್ರ ಹಣಕಾಸು ಸಚಿವಾಲಯದ ಆದಾಯ ಇಲಾಖೆ ನೋಡಿಕೊಳ್ಳುತ್ತಿದ್ದರು. ನಂತರ ಆರ್ಥಿಕ ವ್ಯವಹಾರದತ್ತ ಗಮನ ಹರಿಸಲು ಪ್ರಾರಂಭಿಸಿದ್ದಲ್ಲದೆ, 2016ರಲ್ಲಿ ಮೋದಿಯವರ ನೋಟು ಬ್ಯಾನ್​ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ.