ಆರ್​ಬಿಐನಿಂದ ಹೊಸ 100 ರೂ. ನೋಟಿನ ವಿನ್ಯಾಸ ಬಿಡುಗಡೆ

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಯೋಜನೆ ರೂಪಿಸಿದ್ದು, ಅದರ ವಿನ್ಯಾಸವನ್ನು ಬಿಡುಗಡೆ ಮಾಡಿದೆ.

2016ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರವನ್ನು ಆರ್​ಬಿಐ ಹೊಸ ವಿನ್ಯಾಸದ ನೋಟುಗಳನ್ನು ಬಿಡುಗಡೆ ಮಾಡಿತ್ತು. ಈಗಾಗಲೇ 2000 ರೂ., 500 ರೂ., 10 ರೂ., 50 ರೂ.ನ ಹೊಸ ವಿನ್ಯಾಸದ ನೋಟುಗಳನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ 100 ರೂ. ನ ಹೊಸ ನೋಟು ಲ್ಯಾವೆಂಡರ್​ ಬಣ್ಣ ಹೊಂದಿದ್ದು, 66 ಮಿ.ಮೀ.X 142ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್​ನ ಐತಿಹಾಸಿಕ ‘ರಾಣಿ ಕಿ ವಾವ್​’ನ ಚಿತ್ರ ಹೊಂದಿದೆ.

ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆರ್​ಬಿಐ ತಿಳಿಸಿದೆ. (ಏಜೆನ್ಸೀಸ್​)