VIDEO: ರೆಪೋ ದರವನ್ನು 25 ಮೂಲಾಂಕ ಇಳಿಸಿದ ಆರ್​ಬಿಐ: ಆರ್​ಟಿಜಿಎಸ್​ ಮತ್ತು ಎನ್​ಇಎಫ್​ಟಿ ವಹಿವಾಟು ಶುಲ್ಕ ರದ್ದು

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ ರೆಪೋದರದಲ್ಲಿ 25 ಮೂಲಾಂಕ ಇಳಿಕೆ ಮಾಡಿದೆ. ಇದರಿಂದಾಗಿ ರೆಪೋ ದರ ಈಗ ಶೇ.6ರಿಂದ ಶೇ.5.75ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಕಳೆದ 9 ವರ್ಷಗಳಲ್ಲಿ ರೆಪೋದರ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾದಂತಾಗಿದೆ. 

ಆರ್​ಟಿಜಿಎಸ್​ ಮತ್ತು ಎನ್​ಇಎಫ್​ಟಿ ಶುಲ್ಕಗಳನ್ನೂ ಆರ್​ಬಿಐ ರದ್ದುಗೊಳಿಸಿದೆ. ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಲು ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚಿಸಿದೆ.

ಇಳಿಕೆಯಾಗುತ್ತಾ ಬಡ್ಡಿದರ?
ಆರ್​ಬಿಐ ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ರೆಪೋ ದರವನ್ನು ಇಳಿಕೆ ಮಾಡಿದೆ. ಆದರೂ ಬ್ಯಾಂಕ್​ಗಳು ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಿರಲಿಲ್ಲ. ಹಾಗಾಗಿ, ಈಗಲಾದರೂ ಬ್ಯಾಂಕ್​ಗಳು ರೆಪೋ ದರ ಇಳಿಕೆಯ ಸೌಲಭ್ಯವನ್ನು ತಮಗೆ ತಲುಪಿಸಿ, ಗೃಹ ಮತ್ತು ವಾಹನ ಸೇರಿ ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲಿ ಎಂಬುದು ಗ್ರಾಹಕರ ನಿರೀಕ್ಷೆಯಾಗಿದೆ.

 

Leave a Reply

Your email address will not be published. Required fields are marked *