ರೆಪೋ ದರವನ್ನು 25 ಅಂಶ ಇಳಿಸಿದ ಭಾರತೀಯ ರಿಸರ್ವ್​ ಬ್ಯಾಂಕ್​: ಶೇ.6.25 ಇದ್ದ ದರ ಈಗ ಶೇ.6ಕ್ಕೆ ಇಳಿಕೆ

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ವರ್ಷದಲ್ಲಿ ಎರಡನೇ ಬಾರಿಗೆ ರೆಪೋ ದರವನ್ನು 25 ಅಂಶಗಳ ಇಳಿಕೆ ಮಾಡಿದೆ. ಇದರಿಂದಾಗಿ ಶೇ.6.25 ಇದ್ದ ರೆಪೋ ದರಗಳು ಈಗ ಶೇ.6ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಬಡ್ಡಿ ದರಗಳಲ್ಲಿ ಕೂಡ ಇಳಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಇದು ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳ ಬಾಕಿ ಇರುವಂತೆ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳ ಪಾಲಿಗೆ ಇದು ಸಂತಸದ ಸುದ್ದಿಯಾಗಿದೆ.

ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ ಅವರ ನೇತೃತ್ವದ 6 ಸದಸ್ಯರ ವಿತ್ತೀಯ ನೀತಿ ಸಮಿತಿ ಗುರುವಾರ ಹೊಸ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಸಭೆ ನಡೆಸಿತು. ಈ ಸಭೆಯಲ್ಲಿ ರೆಪೋ ದರಗಳನ್ನು ಇಳಿಸುವ ಬಗ್ಗೆ ನಿರ್ಧರಿಸಿತು. ಇದಕ್ಕೂ ಮುನ್ನ ಈ ವರ್ಷದ ಫೆಬ್ರವರಿಯಲ್ಲಿ ಆರ್​ಬಿಐ ರೆಪೋ ದರಗಳನ್ನು 25 ಅಂಶ ಇಳಿಕೆ ಮಾಡಿತ್ತು. (ಏಜೆನ್ಸೀಸ್​)