22.8 C
Bengaluru
Saturday, January 18, 2020

ಜಿಡಿಪಿ ಮುನ್ನೋಟ ಕುಸಿತ: ಕಳೆದ ಬಾರಿ ಶೇ. 6.1 ಇದ್ದ ದರವನ್ನು 5ಕ್ಕೆ ಇಳಿಸಿದ ಆರ್​ಬಿಐ

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 4.5ಕ್ಕೆ ಇಳಿಕೆಯಾಗಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಆರ್ಥಿಕ ಪ್ರಗತಿಯ ಮುನ್ನೋಟವನ್ನು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಆರ್ಥಿಕ ಕುಸಿತದ ಭೀತಿ ಎದುರಾಗಿರುವ ಸಂದರ್ಭದಲ್ಲೇ ಆರ್​ಬಿಐ ಅಭಿವೃದ್ಧಿಯ ಮುನ್ನೋಟವನ್ನು ಇಳಿಕೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಡಿಪಿ ಶೇ. 6.1 ಇರಲಿದೆ ಎಂದು ಕಳೆದ ಹಣಕಾಸು ಪರಾಮರ್ಶೆ ಸಭೆಯಲ್ಲಿ ಆರ್​ಬಿಐ ಹೇಳಿತ್ತು. ಆದರೆ ಈಗ ಇದನ್ನು ಶೇ. 5ಕ್ಕೆ ಇಳಿಕೆ ಮಾಡಿದೆ. ದೇಶದಲ್ಲಿ ಆರ್ಥಿಕ ಹಿಂಜರಿತ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. 2019-20ರ ದ್ವಿತೀಯಾರ್ಧದಲ್ಲಿ ಜಿಡಿಪಿ ಶೇ. 4.9ರಿಂದ 5.5ರೊಳಗೆ ಇರುವ ನಿರೀಕ್ಷೆ ಇದೆ. ಮುಂದಿನ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಶೇ. 5.9ರಿಂದ 6.3ರಷ್ಟು ಇರುವ ಸಾಧ್ಯತೆ ಇದೆ. ಹೀಗಾಗಿ ಸರಾಸರಿ ಜಿಡಿಪಿ ಮುನ್ನೋಟವನ್ನು ಶೇ. 5ಕ್ಕೆ ಇಳಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಅಕ್ಟೋಬರ್​ನಲ್ಲಿ ನಡೆದ ಸಭೆಯಲ್ಲಿ ಜಿಡಿಪಿ ಮುನ್ನೋಟವನ್ನು ಶೇ. 6.9 ರಿಂದ 6.1ಕ್ಕೆ ಆರ್​ಬಿಐ ಇಳಿಸಿತ್ತು. ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಜಿಡಿಪಿ ಶೇ. 6.6ರಿಂದ 7.2ರವರೆಗೆ ಪ್ರಗತಿ ಕಾಣಲಿದೆ ಎಂದು ಅಂದಾಜಿಸಿತ್ತು. ಆದರೆ ಗ್ರಾಹಕರ ಬೇಡಿಕೆ ಕಡಿಮೆಯಾಗಿರುವುದು, ಜಾಗತಿಕ ಮಟ್ಟದಲ್ಲೂ ಮಂದಗತಿ ಇರುವ ಕಾರಣ ದರ ಇಳಿಕೆ ಮಾಡಮಾಗಿದೆ.

ರೆಪೊ ಯಥಾಸ್ಥಿತಿ: ಆರ್​ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್​ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪ್ರಸಕ್ತ ಆರ್ಥಿಕ ಸಾಲಿನ 5ನೇ ದ್ವೈಮಾಸಿಕ ಸಭೆಯಲ್ಲಿ ಸಮಿತಿಯ ಆರು ಸದಸ್ಯರು ರೆಪೊ (ಶೇ. 5.15) ಮತ್ತು ರಿವರ್ಸ್ ರೆಪೊ (ಶೇ. 4.90) ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಹಣದುಬ್ಬರದ ಪ್ರಮಾಣ ಕಳವಳಕಾರಿಯಾದರೆ ಮುಂಬರುವ ದಿನಗಳಲ್ಲಿ ರೆಪೊ ದರ ಪರಿಷ್ಕರಣೆಗೆ ಅವಕಾಶ ಇದೆ ಎಂದು ಹೇಳಿದ್ದಾರೆ.

ಅಚ್ಚರಿ ನಿರ್ಧಾರ: ಹಿಮ್ಮುಖವಾಗಿರುವ ಆರ್ಥಿಕತೆ, ತಯಾರಿಕಾ ವಲಯದಲ್ಲಿ ಕುಸಿತ, ಉದ್ಯೋಗ ನಷ್ಟ, ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೖೆಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ. 4.5ಕ್ಕೆ ಇಳಿದಿರುವ ಕಾರಣ ರೆಪೊ ದರದಲ್ಲಿ 25 ಮೂಲಾಂಶ (ಶೇ. 4.90ಕ್ಕೆ ಇಳಿಕೆ) ಕಡಿತ ಮಾಡಲಾಗುತ್ತದೆ ಎಂದು ಬಹುತೇಕ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದರು. ಆದರೆ, ಆರ್​ಬಿಐ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದೆ.

ಹಣದುಬ್ಬರ ಶೇ.4.7?

ಪ್ರಸ್ತುತ ಹಣದುಬ್ಬರದ ಪ್ರಮಾಣ ಶೇ. 4 ಇದೆ. 2019-20ರ ದ್ವಿತೀಯಾರ್ಧದಲ್ಲಿ ಹಣದುಬ್ಬರದ ಮುನ್ನೋಟವನ್ನು ಶೇ. 5.1ರಿಂದ ಶೇ. 4.7ಕ್ಕೆ ಮತ್ತು 2020-21ರ ಪೂರ್ವಾರ್ಧದಲ್ಲಿ ಶೇ. 4ರಿಂದ 3.8ಕ್ಕೆ ಆರ್​ಬಿಐ ಅಂದಾಜಿಸಿದೆ. ಅಕ್ಟೋಬರ್​ನಲ್ಲಿ ನಡೆದ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ಬಡ್ಡಿ ದರದಲ್ಲಿ 25 ಮೂಲಾಂಶ ಕಡಿತ ಮಾಡಲಾಗಿತ್ತು. ಇದರಿಂದ ರೆಪೊ ದರ ಶೇ. 5.40ರಿಂದ 5.15ಕ್ಕೆ ಇಳಿದಿತ್ತು. ಈ ಮೂಲಕ ಸತತ ಐದು ದ್ವೈಮಾಸಿಕದಲ್ಲಿ ಒಟ್ಟಾರೆ 135 ಮೂಲಾಂಶವನ್ನು ಆರ್​ಬಿಐ ಕಡಿತ ಮಾಡಿತ್ತು.

ಸರ್ಕಾರ ಸುಧಾರಣಾ ಕ್ರಮ

ಆರ್ಥಿಕತೆ ಕುಸಿತ ತಡೆಯಲು ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ದರ ಶೇ. 5ಕ್ಕೆ ಕುಸಿದಾಗಲೇ ಸರ್ಕಾರ ವಿದೇಶಿ ಹೂಡಿಕೆದಾರರಿಗೆ ವಿಧಿಸಿದ್ದ ತೆರಿಗೆ ಇಳಿಕೆ, ಕಾರ್ಪೆರೇಟ್ ತೆರಿಗೆಯಲ್ಲಿ ಗಣನೀಯ ಕಡಿತ, ಹತ್ತು ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ವಿಲೀನಗೊಳಿಸಿ 4 ಬೃಹತ್ ಬ್ಯಾಂಕ್ ರಚನೆ ಮುಂತಾದ ಕ್ರಮ ಘೋಷಣೆ ಮಾಡಿತ್ತು. ಆದರೂ ದ್ವಿತೀಯ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 4.5ಕ್ಕೆ ಹಿನ್ನಡೆ ಕಂಡಿತು.

ಹಣದುಬ್ಬರ ಪ್ರಮಾಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ಸುಧಾರಣಾ ಕ್ರಮ ಕೈಗೊಳ್ಳುತ್ತೇವೆ. ಪ್ರತಿಸಾರಿಯೂ ಯಾಂತ್ರಿಕವಾಗಿ ರೆಪೊ ದರ ಕಡಿತ ಮಾಡಲಾಗದು. ಏಕೆಂದರೆ ಬಡ್ಡಿ ದರ ಕಡಿತ ಮಾಡಿದರೆ ಅದರಿಂದಾಗುವ ಪರಿಣಾಮದ ಅರಿವು ಬಹಳ ಮುಖ್ಯ.

| ಶಕ್ತಿಕಾಂತದಾಸ್ ಆರ್​ಬಿಐ ಗವರ್ನರ್

-ಠಿ; 10 ಸಾವಿರದೊಳಗಿನ ಖರೀದಿಗೆ ಪಿಪಿಐ

ಪ್ರಿಪೇಯ್್ಡ ಪೇಮೆಂಟ್ ಇನ್​ಸ್ಟ್ರುಮೆಂಟ್(ಪಿಪಿಐ) ವ್ಯವಸ್ಥೆಯನ್ನು ಆರ್​ಬಿಐ ಪ್ರಸ್ತಾಪಿಸಿದೆ. ಪಿಪಿಐ ಅನ್ನು -ಠಿ; 10 ಸಾವಿರದೊಳಗಿನ ಖರೀದಿ ಅಥವಾ ಸೇವಾ ಬಾಬ್ತಿಗೆ ಬಳಕೆ ಮಾಡಬಹುದಾಗಿದೆ. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗುತ್ತದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಪಿಪಿಐಗೆ ಹಣವನ್ನು ಬ್ಯಾಂಕ್ ಖಾತೆ, ಡಿಬಿಟ್/ಕ್ರೆಡಿಟ್ ಕಾರ್ಡ್​ಗಳ ಮಾತ್ರ ತುಂಬಬಹುದು. ತಿಂಗಳಿಗೆ ಗರಿಷ್ಠ -ಠಿ; 50 ಸಾವಿರದವರಿಗೂ ಹಣ ಜಮಾ ಮಾಡಬಹುದು. ಪಿಪಿಐ ಬಳಕೆ ಕುರಿತ ಸೂಚನೆಯನ್ನು ಈ ಮಾಸಾಂತ್ಯಕ್ಕೆ ನೀಡುವುದಾಗಿ ಆರ್​ಬಿಐ ಹೇಳಿದೆ. ಗೌಪ್ಯ ವ್ಯವಸ್ಥೆಯ ಪಿಪಿಐ, ಅರೆಗೌಪ್ಯ ವ್ಯವಸ್ಥೆಯ ಪಿಪಿಐ ಮತ್ತು ಮುಕ್ತ ವ್ಯವಸ್ಥೆಯ ಪಿಪಿಐ ಎಂದು ಮೂರು ವಿಧದ ಪಿಪಿಐಗಳನ್ನು ಆರ್​ಬಿಐ ಪ್ರಸ್ತಾಪಿಸಿದೆ.

ಖಾಸಗಿ ಡಿಜಿಟಲ್ ಕರೆನ್ಸಿಗೆ ಅವಕಾಶವಿಲ್ಲ

ಖಾಸಗಿ ಸಂಸ್ಥೆಗಳು ನೀಡುವ ಡಿಜಿಟಲ್ ಕರೆನ್ಸಿಗೆ ಅವಕಾಶವಿಲ್ಲ. ಇಂಥದನ್ನು ಆರ್​ಬಿಐ ಅನುಮೋದಿಸುವುದಿಲ್ಲ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ‘ಲಿಬ್ರಾ’ ಹೆಸರಿನ ಡಿಜಿಟಲ್ ಕರೆನ್ಸಿ ಘೋಷಣೆ ಮಾಡುವ ಬಗ್ಗೆ ಫೇಸ್​ಬುಕ್ ಹೇಳಿಕೆ ನೀಡಿರುವುದಕ್ಕೆ ದಾಸ್ ಈ ಪ್ರತಿಕ್ರಿಯೆ ನೀಡಿದ್ದಾರೆ.

 

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...