More

    ವೊಡಾಫೋನ್ ಎಂ-ಪೇಸಾದ ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್ ಮಾಡಿದ ಆರ್​ಬಿಐ

    ಮುಂಬೈ: ವೊಡಾಫೋನ್​ಗೆ ನೀಡಿದ್ದ ಎಂ-ಪೇಸಾದ ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಹೇಳಿದೆ.

    ಸರ್ಟಿಫಿಕೇಟ್ ಆಫ್ ಅಥೋರೈಸೇಷನ್​ ಕ್ಯಾನ್ಸಲ್ ಆಗಿರುವ ಕಾರಣ ವೊಡಾಫೋನ್​ ಇನ್ನು ಮೇಲೆ ಪ್ರೀಪೇಯ್ಡ್​ ಇನ್​ಸ್ಟ್ರುಮೆಂಟ್ ಬಳಸುವಂತಿಲ್ಲ. ವೊಡಾಫೋನ್​ ಸ್ವಯಂಪ್ರೇರಿತವಾಗಿ ಅಥೋರೈಸೇಷನ್​ ಸರ್ಟಿಫಿಕೇಟನ್ನು ಸರಂಡರ್ ಮಾಡಿತ್ತು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

    ಆದಾಗ್ಯೂ, ಗ್ರಾಹಕರು ಅಥವಾ ವ್ಯಾಪಾರಿಗಳು ಪಿಎಸ್​ಒ(ಪೇಮೆಂಟ್ ಸಿಸ್ಟಮ್ ಆಪರೇಟರ್​) ರೀತಿಯಲ್ಲಿ ವ್ಯವಹರಿಸಬಹುದಾಗಿದ್ದು, ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್​ ಆಗಿರುವ ಕಾರಣ 2022ರ ಸೆಪ್ಟೆಂಬರ್ 30ರೊಳಗೆ ಸೆಟಲ್​​ಮೆಂಟ್ ಮಾಡಿಕೊಳ್ಳಬೇಕು.

    ವೊಡಾ ಫೋನ್ ಎಂ ಪೇಸಾ ಸೇರಿ 11 ಸಂಸ್ಥೆಗಳಿಗೆ ಆರ್​ಬಿಐ 2015ರಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸಲು ಪರವಾನಗಿ ನೀಡಿತ್ತು. ಕಳೆದ ವರ್ಷ ಆದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಬಾಗಿಲು ಮುಚ್ಚುವ ಘೋಷಣೆ ಮಾಡಿದ ಬೆನ್ನಲ್ಲೇ ಎಂ-ಪೇಸಾವನ್ನು ಮುಚ್ಚಲು ವೊಡಾಫೋನ್ ತೀರ್ಮಾನಿಸಿತ್ತು. ಎಂ-ಪೇಸಾ ಆದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ಸ್ ಬ್ಯಾಂಕ್ ಜತೆ ವಿಲೀನವಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts