More

  ಹಸಿ ಶುಂಠಿ ಕಳವು, ಇಬ್ಬರ ವಿರುದ್ಧ ದೂರು ದಾಖಲು

  ಶಿವಮೊಗ್ಗ: ಹಸಿ ಶುಂಠಿಗೆ ಈಗ ಬಂಗಾರದ ಬೆಲೆ ಬಂದಿದ್ದು ಮಾರುಕಟ್ಟೆ ದರ ಕ್ವಿಂಟಾಲ್‌ಗೆ 20 ಸಾವಿರ ರೂ. ಗಡಿ ದಾಟಿದೆ. ಹಾಗಾಗಿ ಶುಂಠಿ ಬೆಳೆದ ರೈತರು ಇದೀಗ ಹಗಲು-ರಾತ್ರಿ ಬೆಳೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಕಳ್ಳರ ಹಾವಳಿ ಮುಂದುವರಿದಿದ್ದು ಶಿಕಾರಿಪುರ ತಾಲೂಕಿನಲ್ಲಿ 15 ಕ್ವಿಂಟಾಲ್ ಶುಂಠಿ ಕಳವು ಮಾಡಲಾಗಿದೆ.

  ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದ ಬೀರಪ್ಪ ಎಂಬುವರಿಗೆ ಸೇರಿದ ಶುಂಠಿ ಕಳವು ಮಾಡಲಾಗಿದೆ. ಬೀರಪ್ಪ ಅವರು ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದ ಮಾಲ್ಲೇಶಪ್ಪ ಅವರ ಸರ್ವೆ ನಂಬರ್ 62/1ರಲ್ಲಿ ಜಮೀನಿನನ್ನು ಲೀಜ್‌ಗೆ ಪಡೆದು ಶುಂಠಿ ಬೆಳೆದಿದ್ದರು.
  ಮೇ 28ರಂದು ರಾತ್ರಿ 15 ಕ್ವಿಂಟಲ್ಗಿಂತ ಹೆಚ್ಚು ಶುಂಠಿ ಕಳವು ಮಾಡಿದ್ದು ಇದನ್ನು ಪತ್ತೆ ಮಾಡಲು ಬೀರಪ್ಪ ಮತ್ತು ಅವರ ತಂದೆ ಮಹಾದೇವಪ್ಪ ಅವರು ರಾತ್ರಿ ಕಾವಲಿದ್ದರು. ಈ ವೇಳೆ ಜಮೀನಿನಲ್ಲಿದ್ದ ಶುಂಠಿ ಕೀಳುತ್ತಿದ್ದ ಕಳ್ಳರಿಬ್ಬರನ್ನು ಹಿಡಿಯಲು ಯತ್ನಿಸಿದಾಗ ಮಣ್ಣು ಎರಚಿ ಪರಾರಿಯಾಗಿದ್ದರು. ಅದಕ್ಕೂ ಮೊದಲು ಒಮ್ಮೆ ಶುಂಠಿ ಕಳವು ಮಾಡಲಾಗಿತ್ತು.
  ಶುಂಠಿ ಕಳವು ಮಾಡಿದವರು ಪರಿಚಯಸ್ಥರೇ ಆಗಿದ್ದರಿಂದ ರಾಜೀ ಪಂಚಾಯ್ತಿ ನಡೆಸುವುದಾಗಿ ಬೀರಪ್ಪ ಅವರಿಗೆ ಗ್ರಾಮಸ್ಥರು ಭರವಸೆ ನೀಡಿದ್ದರು. ಆದರೆ ಶುಂಠಿ ಕಳವು ಮಾಡಿದವರು ರಾಜೀ ಪಂಚಾಯಿತಿಗೂ ಬಾರದ ಕಾರಣ ಇಬ್ಬರ ವಿರುದ್ಧ ಬೀರಪ್ಪ ನೀಡಿದ ದೂರಿನ ಮೇರೆಗೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts