ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರಿದ್ದರೆ, ತಂದೆ ಮತ್ತು ಅಕ್ಕ ಕಾಂಗ್ರೆಸ್​ಗೆ ಸೇರ್ಪಡೆ

ಜಾಮ್​ನಗರ (ಗುಜರಾತ್​): ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿಗೆ ಸೇರಿ ಒಂದು ತಿಂಗಳ ಬಳಿಕ ಅವರ ತಂದೆ ಮತ್ತು ಅಕ್ಕ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ಜಾಮ್​ನಗರ ಇಲ್ಲೆಯ ಕಲವದ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಟೀದಾರ್​ ಮೀಸಲಾತಿ ಹೋರಾಟಗಾರ ಮತ್ತು ಕಾಂಗ್ರೆಸ್​ ನಾಯಕ ಹಾರ್ದಿಕ್​ ಪಟೇಲ್​ ನೇತೃತ್ವದಲ್ಲಿ ಜಡೇಜಾ ತಂದೆ ಅನಿರುದ್ಧ್ ಸಿನ್ಹ್​ ಜಡೇಜಾ ಮತ್ತು ಅವರ ಅಕ್ಕ ನೈನಾಬಾ ಜಡೇಜಾ ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಮಾರ್ಚ್​ 3 ರಂದು ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿಗೆ ಸೇರ್ಪಡೆಯಾಗಿದ್ದರು. (ಏಜೆನ್ಸೀಸ್​)