ನಿಜವಾದ ಗಂಡು ಸಿಂಹದ ಎದುರು ನಿಲ್ಲುತ್ತಾನೆ : ಲಯನ್​ ಜಡ್ಡು

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರರು ಬಿಡುವಿನ ವೇಳೆಯಲ್ಲಿ ಸಾಕಷ್ಟು ಎಂಜಾಯ್​ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತೆ ಆಲ್​ ರೌಂಡರ್​ ರವೀಂದ್ರ ಜಡೆಜಾ ಅವರು ಇತ್ತೀಚೆಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಯಾವುದು ಆ ಫೋಟೋ ಅಂತಿರಾ… ದಕ್ಷಿಣ ಆಫ್ರಿಕಾದ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿ ಸಿಂಹದ ಜತೆ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಇದೀಗ ವೈರಲ್​ ಆಗಿದೆ. ಅದರಲ್ಲಿ ಸಿಂಹವೊಂದರ ಮೇಲೆ ಜಡೇಜಾ ಹಾಯಾಗಿ ವರಗಿ ಕೊಂಡು ಮಲಗಿದ್ದಾರೆ.

ಸಿಂಹ ಎಲ್ಲಿದ್ದರೂ ಸಿಂಹವೇ, ಗಿರ್​ ಪ್ರದೇಶದಲ್ಲಿರಲಿ ಅಥವಾ ಜೋಹಾನ್ಸಬರ್ಗ್​​ನಲ್ಲಿಯಾದರೂ ಇರಲಿ. ಪಂಜರ್​ದಲ್ಲಿರುವ ಸಿಂಹಕ್ಕೆ ಬಹಳ ಜನ ಕಲ್ಲು ಎಸೆಯುತ್ತಾರೆ. ಆದರೆ, ನಿಜವಾದ ಗಂಡು ಸಿಂಹದ ಎದುರು ನಿಲ್ಲುತ್ತಾರೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ಭಾರತದ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬುಮ್ರಾ ಕೂಡ ಸಿಂಹದ ಮರಿಯ ಜತೆ ಇರುವ ಫೋಟೋ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಜೀವನ ಒಂದು ಹೆಜ್ಜೆ ನಿಮ್ಮನ್ನು ಹಿಂದೆ ಜಗ್ಗಿದರೆ ಹೆದರಬೇಡಿ. ಯಾಕೆಂದರೆ ಬೇಟೆ ಆಡುವ ಮುನ್ನ ಸಿಂಹ ಕೂಡ ಒಂದು ಹೆಜ್ಜೆ ಹಿಂದೆ ತೆಗೆದುಕೊಂಡು ನಂತರ ಮುಂದಕ್ಕೆ ಜಿಗಿಯುತ್ತದೆ ಎಂದು ಬರೆದಿದ್ದಾರೆ.

ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯನ್ನು ಭಾರತ 0-2 ರಿಂದ ಸೋತಿದೆ. ಇನ್ನು ಒಂದು ಪಂದ್ಯ ಬಾಕಿ ಇದೆ. ನಂತರ ಉಭಯ ತಂಡಗಳು ಏಕ ದಿನ ಹಾಗೂ ಟಿ20 ಸರಣಿಯನ್ನು ಆಡಲಿವೆ. ( ಏಜೆನ್ಸೀಸ್)

Leave a Reply

Your email address will not be published. Required fields are marked *