More

    RAVIKE PRASANGA REVIEW : ಬಟ್ಟೆ ಬರೆ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ಚಿತ್ರ: ರವಿಕೆ ಪ್ರಸಂಗ
    ನಿರ್ದೇಶನ ಮತ್ತು ನಿರ್ಮಾಣ: ಸಂತೋಷ್​ ಕೊಡೆಂಕೇರಿ
    ತಾರಾಗಣ: ಗೀತಾ ಭಾರತಿ ಭಟ್​, ಸುಮನ್​ ರಂಗನಾಥ್​, ಸಂಪತ್​ ಮೈತ್ರೇಯ, ರಾಕೇಶ್​ ಮಯ್ಯ, ಪದ್ಮಜಾ ರಾವ್​, ಗೋವಿಂದೇಗೌಡ, ಪ್ರವಿಣ್​ ಅಥರ್ವ ಮತ್ತು ಮುಂತಾದವರು.

    RAVIKE PRASANGA REVIEW : ಬಟ್ಟೆ ಬರೆ!

    ಆಕೆ ಸಾನ್ವಿ ಸಂಪಾಜೆ (ಗೀತಾ). ಅಪ್ಪ, ಅಮ್ಮನ ಏಕೈಕ ಸುಪುತ್ರಿ. ಚಿಕ್ಕಪ್ಪ, ಚಿಕ್ಕಮ್ಮ ಮತ್ತವರ ಮಗಳ ಜತೆ ಸಾನ್ವಿಯದು ಚಿಕ್ಕ ಅವಿಭಕ್ತ ಕುಟುಂಬ. ಆಕೆಯದೋ ವಯಸ್ಸು 28 ದಾಟಿದರೂ, 32 ಹುಡುಗರನ್ನು ನೋಡಿದರೂ ಮದುವೆ ಫಿಕ್ಸ್​ ಆಗಿರುವುದಿಲ್ಲ. ಕೊನೆಗೊಮ್ಮೆ ಕೆನಡಾ ದೇಶದಲ್ಲಿ ಕೆಲಸ ಮಾಡುತ್ತಿರುವ ಸ್ಪುರದ್ರೂಪಿ ಹುಡುಗನ ಸಂಬಂಧ ಬರುತ್ತದೆ. ಆ ಹುಡುಗನನ್ನೇ ಮದುವೆಯಾಗಬೇಕೆಂದು ಅಮ್ಮ ಕೊಡಿಸಿದ ರೇಷ್ಮೆ ಸೀರೆ ಧರಿಸಲು ಸಾನ್ವಿ ನಿರ್ಧರಿಸುತ್ತಾಳೆ. ಅದಕ್ಕೆ ರವಿಕೆ ಹೊಲಿಸಲು ಚಂದ್ರಣ್ಣ ಲೇಡೀಸ್​ ಟೈಲರ್​ ಚಂದ್ರಶೇಖರನಿಗೆ (ಸಂಪತ್​) ನೀಡುತ್ತಾಳೆ. ಆದರೆ, ರವಿಕೆ ಆಕೆಗೆ ಹೊಂದುವುದಿಲ್ಲ. ಅದನ್ನೇ ಸೀರಿಯಸ್​ ಆಗಿ ಪರಿಗಣಿಸುವ ಆಕೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ತೆರಳುತ್ತಾಳೆ, ಕೋರ್ಟ್​ ಮೆಟ್ಟಿಲೂ ಏರುತ್ತಾಳೆ. ಮುಂದೆ? ಕೆನಡಾ ಹುಡುಗನ ಜತೆ ಆಕೆಯ ಮದುವೆಯಾಗುತ್ತಾ? ಕೋರ್ಟ್​ನಲ್ಲಿ ತೀರ್ಪು ಯಾರ ಪರ ಬರುತ್ತೆ? ಎಂಬುದರ ಸುತ್ತ ಸಂತೋಷ್​ ಕೊಡೆಂಕೇರಿ “ರವಿಕೆ ಪ್ರಸಂಗ’ವನ್ನು ಹೊಲಿದಿದ್ದಾರೆ.

    RAVIKE PRASANGA REVIEW : ಬಟ್ಟೆ ಬರೆ!


    “ರವಿಕೆ ಪ್ರಸಂಗ’ 152 ನಿಮಿಷಗಳ ಸಿನಿಮಾ. ಹಾಸ್ಯಮಯವಾಗಿಯೇ ಕಥೆ ಸಾಗುತ್ತದಾದರೂ ಅಲ್ಲಲ್ಲಿ ಹಳಿ “ತಪು$್ಪ’ತ್ತದೆ. ಆ ತಪ್ಪಿಲ್ಲದೇ “ರವಿಕೆ’ಗೆ ಕತ್ತರಿ ಪ್ರಯೋಗವಾಗಿದ್ದರೆ, ಪ್ರೇಕ್ಷಕರಿಗೆ ಡಿಸೈನ್​ ಇಷ್ಟವಾಗುತ್ತಿತ್ತೇನೋ?! ಪಾವನಾ ಸಂತೋಷ್​ ಅವರ ದಣ ಕನ್ನಡ ಭಾಷೆಯ ಸೊಗಡಿನ ಕಥೆ, ಸಂಭಾಷಣೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಗೀತಾ ಭಾರತಿ ಭಟ್​ ಮತ್ತು ಸಂಪತ್​ ಮೈತ್ರೇಯ ಚಿತ್ರದ ಹೈಲೈಟ್​. ಉಳಿದಂತೆ ಸುಮನ್​ ರಂಗನಾಥ್​, ರಾಕೇಶ್​ ಮಯ್ಯ, ಪದ್ಮಜಾ ರಾವ್​, ಗೋವಿಂದೇಗೌಡ, ಪ್ರವಿಣ್​ ಅಥರ್ವ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts