ಅಶ್ವಿನ್ ಅವರ ಮಂಕಡಿಂಗ್​ ಪ್ರಕರಣವನ್ನು ಟ್ರಾಫಿಕ್​ ಅಭಿಯಾನಕ್ಕೆ ಬಳಸಿಕೊಂಡ ಕೋಲ್ಕತ ಸಂಚಾರ ಪೊಲೀಸರು

ಕೋಲ್ಕತ: ಸೋಮವಾರ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ನಡೆದ ಐಪಿಎಲ್​ ಪಂದ್ಯದಲ್ಲಿ ವಿವಾದಿತ ರೀತಿಯಲ್ಲಿ ಬಟ್ಲರ್ ವಿಕೆಟ್ ಉರುಳಿಸಿದ್ದು, ಸೋಲುವ ಪಂದ್ಯವೂ ಪಂಜಾಬ್​ ಕಡೆ ವಾಲುವಂತೆ ಮಾಡಿತು. ಬಳಿಕ ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ಈಗ ಕೋಲ್ಕತ ಸಂಚಾರ ಪೊಲೀಸರು ಟ್ರಾಫಿಕ್​ ಅಭಿಯಾನಕ್ಕೆ ಬಳಸಿಕೊಂಡಿದ್ದಾರೆ.

ಜಾಸ್​ ಬಟ್ಲರ್​ ಅವರ ವಿಕೆಟ್​ ಉರುಳಿಸುತ್ತಿರುವ ಅಶ್ವಿನ್​ ಚಿತ್ರ ಹಾಗೂ ಕಾರೊಂದು ಸಿಗ್ನಲ್​ ಇದ್ದರೂ ಜೀಬ್ರಾ ಗೆರೆಯನ್ನು ದಾಟುತ್ತಿರುವ ಎರಡೂ ಚಿತ್ರವನ್ನು ಸೇರಿಸಿ ಕೋಲ್ಕತ ಪೊಲೀಸರು ಅಭಿಯಾನ ಶುರು ಮಾಡಿದ್ದು, ಕ್ರೀಸ್​ ಆಗಲಿ, ರಸ್ತೆಯಾಗಲಿ ಗೆರೆಯನ್ನು ದಾಟಿದರೆ, ಪಶ್ಚಾತಾಪ ಪಡಬೇಕಾಗುತ್ತದೆ ಎಂಬ ಘೋಷವಾಕ್ಯದ ಮೂಲಕ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೇ ಪೊಲೀಸರ ಈ ವಿನೂತನ ಯೋಚನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಅಶ್ವಿನ್​ ಮಾಡಿದ್ದ ವಿವಾದಿತ ಔಟ್​ ಏನು?
ಬೌಲರ್ ಚೆಂಡು ಎಸೆಯುವ ಮುನ್ನವೇ, ನಾನ್​ಸ್ಟ್ರೈಕರ್​ ಎಂಡ್​ನಲ್ಲಿದ್ದ ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟಾಗ, ಬೌಲರ್ ಚೆಂಡನ್ನು ಎಸೆಯದೇ ಬೇಲ್ಸ್​ಅನ್ನು ಎಗರಿಸಿ ಔಟ್​ಗೆ ಅಪೀಲ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಎಂಸಿಸಿಯ ಕ್ರಿಕೆಟ್ ನಿಯಮದಲ್ಲೂ ಮಂಕಡಿಂಗ್ ಔಟ್ ಮಾನ್ಯತೆ ಪಡೆದಿದೆ. ಇದೇ ರೀತಿಯಲ್ಲಿ ಅಶ್ವಿನ್​ ಜಾಸ್​ ಬಟ್ಲರ್​ ವಿಕೆಟ್​ ಅನ್ನು ಉರುಳಿಸಿದ್ದರು. ಇದು ಪಂಜಾಬ್​ ತಂಡದ ಪಾಲಿಗೆ ಗೆಲುವಿನ ಟರ್ನಿಂಗ್​ ಪಾಯಿಂಟ್​ ಆಗಿತ್ತು. ಪಂದ್ಯದ ಬಳಿಕ ಅಶ್ವಿನ್​ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. (ಏಜೆನ್ಸೀಸ್​)

ವಿವಾದಿತ ಔಟ್​ ಮಾಡಿದ ಅಶ್ವಿನ್​ ನಡೆಗೆ ಭಾರಿ ವಿರೋಧ: ಪಂಜಾಬ್​ ನಾಯಕ ಕೊಟ್ಟ ಪಂಚ್​ ಹೀಗಿದೆ…

ವಿವಾದದ ಬಿಸಿ ಏರಿಸಿದ ಮಂಕಡಿಂಗ್ ರನೌಟ್