ಬಾಲಿವುಡ್​ ನಟಿಯೊಂದಿಗೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಡೇಟಿಂಗ್​?

ನವದೆಹಲಿ: ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರು ಬಾಲಿವುಡ್​ ನಟಿಯೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.​​

56 ವರ್ಷದ ರವಿಶಾಸ್ತ್ರಿ ಅವರು 36 ವರ್ಷದ ಬಾಲಿವುಡ್​ ನಟಿ ನಿಮ್ರತ್ ಕೌರ್​ ಅವರ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆಂಬ ಊಹಾಪೋಹಗಳು ಹರಿದಾಡುತ್ತಿವೆ. ಇಬ್ಬರು ಕೂಡ ಕಳೆದ ಎರಡು ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದು, ಇಬ್ಬರ ನಡುವಿನ ಸಂಬಂಧವನ್ನು ಸಾಕಷ್ಟು ರಹಸ್ಯವಾಗಿಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

2015ರಿಂದಲೂ ಪ್ರಮುಖ ಕಾರು ಕಂಪನಿಯೊಂದು ಈ ಜೋಡಿಯನ್ನು ತಮ್ಮ ಹೊಸ ಮಾದರಿಯ ಕಾರುಗಳನ್ನು ಉದ್ಘಾಟಿಸಲು ಅನೇಕ ಬಾರಿ ಆಹ್ವಾನ ನೀಡಿರುವ ಬಗ್ಗೆಯೂ ತಿಳಿಸಲಾಗಿದೆ.

ನಿಮ್ರತ್​ ಅವರು ತಮ್ಮ ವೈಯಕ್ತಿಕ ಜೀವನವನ್ನು ಸಾಧ್ಯವಾದಷ್ಟು ರಹಸ್ಯವಾಗಿಟ್ಟಿದ್ದಾರೆ. ಇದಲ್ಲದೆ, ರವಿಶಾಸ್ತ್ರಿ ಅವರು 1980ರ ಮಧ್ಯದಲ್ಲೇ ಮತ್ತೊಬ್ಬ ಬಾಲಿವುಡ್​ ನಟಿ ಅಮೃತ ಸಿಂಗ್​ ಅವರೊಂದಿಗೆ ಲವ್​ ಅಫೇರ್​ ಹೊಂದಿದ್ದರು.

ಶಾಸ್ತ್ರಿ ಅವರು ಕಳೆದ ಹತ್ತು ವರ್ಷಗಳಿಂದ ಪತ್ನಿ ರಿತು ಅವರಿಂದ ಬೇರೆಯಾಗಿದ್ದಾರೆ. ಸದ್ಯ ಅವರು ಇಂಗ್ಲೆಂಡ್​ ಪ್ರವಾಸದಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್​)