ಬೆಂಗಳೂರು ನಗರ ಪಶ್ಚಿಮ ಡಿಸಿಪಿಯಾಗಿ ರವಿ ಚೆನ್ನಣ್ಣನವರ್‌ ಅಧಿಕಾರ ಸ್ವೀಕಾರ

ಬೆಂಗಳೂರು: ಖಡಕ್​ ಅಧಿಕಾರಿ, ಯೂತ್‌ ಐಕಾನ್‌ ಆಗಿ ಗುರುತಿಸಿಕೊಂಡಿರುವ ಮೈಸೂರು ಎಸ್​.ಪಿ. ರವಿ ಡಿ. ಚೆನ್ನಣ್ಣನವರ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಡಿಸಿಪಿ ಎಂ.ಎನ್​.ಅನುಚೇತ್​​ ಅವರು ರವಿ ಚೆನ್ನಣ್ಣನವರ್​ಗೆ ಅಧಿಕಾರ ಹಸ್ತಾಂತರ ಮಾಡಿದರು. ಮೈಸೂರಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ರವಿ ಡಿ. ಚೆನ್ನಣ್ಣನವರ್ ಸೇವೆ ಸಲ್ಲಿಸುತ್ತಿದ್ದರು.

ಅಧಿಕಾರ ಸ್ವೀಕರಿಸಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಬೆಂಗಳೂರು ನನಗೆ ತುಂಬಾ ಪರಿಚಯವಿದೆ. ನಾನು ಜ್ಞಾನಭಾರತಿ ಯೂನಿವರ್ಸಿಟಿಯಲ್ಲಿ ಓದಿದ್ದೇನೆ. ಸಿಐಡಿ, ಬಿ.ಕೆ ಸಿಂಗ್. ಸುನೀಲ್ ಕುಮಾರ್‌ರೊಂದಿಗೆ ಕೆಲಸ ಮಾಡಿದ್ದೇನೆ. ಬೇಸಿಕ್ ಪೊಲೀಸಿಂಗ್ ಕೆಲಸ ಮಾಡುತ್ತೇನೆ. ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *