ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿಚನ್ನಣ್ಣನವರ್ ಕಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ಕಾರಹಳ್ಳಿ ಕ್ರಾಸ್ನ ಹೋಟೆಲ್ ನಲ್ಲಿ ಸಭೆ ನಡೆಸಿದ ರವಿಚನ್ನಣ್ಣನವರ್, ನಂದಿಬೆಟ್ಟದ ತಪ್ಪಲಿನ ಹೋಟೆಲ್-ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕಾನೂನು ನಿಯಮಗಳನ್ನು ಮೀರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಅನುಮತಿ ಪಡೆಯದೆ ಹೊಸ ವರ್ಷಾಚರಣೆ ಮಾಡಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಅನುಮತಿ ಪಡೆಯದೆ ಮದ್ಯ ಮಾರಾಟ ಮಾಡಿದರೆ ಕೇಸ್ ದಾಖಲಾಗುತ್ತದೆ. ಡಿಜೆಗೆ ಅನುಮತಿ ಇಲ್ಲ. ಡಿಜೆ ಹಾಕಿ ಪಾರ್ಟಿ ಮಾಡಿದರೂ ಪ್ರಕರಣ ದಾಖಲಿಸಲಾಗುವುದು. ಸಭ್ಯ ರೀತಿಯಲ್ಲಿ ಊಟ ಮಾಡಿಕೊಂಡು ಮನರಂಜನೆ ಪಡೆಯಲು ಅಭ್ಯಂತರವಿಲ್ಲ. ಆದರೆ, ಹೊಸ ವರ್ಷದ ಹೆಸರಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದಿದ್ದಾರೆ.
ಗ್ರೌಂಡ್ ಜೀರೋ, ಹಿಲ್ ಡ್ರೈವ್ ಮಿಸ್ಟ್ ಕೆಫೆ, ಹ್ಯಾಂಗ್ ಔಟ್ಗಳ ಮೇಲೆ ದೂರುಗಳಿವೆ. ಹಾಗಾಗಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ರವಿ ಚನ್ನಣ್ಣನವರ್ ವಾರ್ನಿಂಗ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)