More

    ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

    ಬೆಂಗಳೂರು: ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’ ಚಿತ್ರವು ಆ. 12ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಮಂಗಳವಾರ ಯೂಟ್ಯೂಬ್​ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಏಳು ನಿಮಿಷ ಎರಡು ಸೆಕೆಂಡ್​ಗಳ ಅವಧಿಯದ್ದಾಗಿರುವ ಟ್ರೇಲರ್ ಹೊಸ ದಾಖಲೆ ಬರೆದಿದೆ. ಕನ್ನಡವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಉದ್ದದ ಟ್ರೇಲರ್ ಇದುವರೆಗೂ ಬಿಡುಗಡೆಯಾದ ಉದಾಹರಣೆ ಇರಲಿಲ್ಲ.

    ಇದಕ್ಕೂ ಮುನ್ನ, ಸೋಮವಾರ ರಾತ್ರಿ ನಗರದ ಜಿಟಿ ಮಾಲ್​ನಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿದ್ದರು ರವಿಚಂದ್ರನ್. ಈ ಕಾರ್ಯಕ್ರಮದಲ್ಲಿ ಜಗ್ಗೇಶ್, ಸುದೀಪ್, ಶರಣ್, ಧನಂಜಯ್, ಬಾಲಾಜಿ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಟ್ರೇಲರ್ ಪ್ರದರ್ಶಿಸಲಾಯಿತು. ಟ್ರೇಲರ್​ನಲ್ಲಿ ನ್ಯಾಯ, ಸಮಯ, ಬದುಕು ಮುಂತಾದ ಹಲವು ವಿಷಯಗಳ ಕುರಿತು ರವಿಚಂದ್ರನ್ ವ್ಯಾಖ್ಯಾನ ನೀಡಿದ್ದಾರೆ.

    ‘ರವಿ ಬೋಪಣ್ಣ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಅಭಿನಯಿಸಿದ್ದಾರೆ. ಮಿಕ್ಕಂತೆ ಸುದೀಪ್, ಮೋಹನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ 50ನೇ ಚಿತ್ರವಾಗಿದ್ದು, ರವಿಚಂದ್ರನ್ ಅವರೇ ನಿರ್ದೇಶನದ ಜತೆಗೆ ನಿರ್ವಣವನ್ನೂ ಮಾಡಿದ್ದಾರೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts