ರವಿ ಬೆಳಗೆರೆ ಬಿಗ್​ಬಾಸ್​ ಮನೆಗೆ ಹೋಗಿದ್ದು ವಿಶೇಷ ಅತಿಥಿಯಾಗಾ? ಮತ್ತೊಮ್ಮೆ ಎಂಟ್ರಿ ಕೊಡುವುದು ಖಚಿತಾನಾ?

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್​ಬಾಸ್ ಮನೆಗೆ ಹೋಗಿ ಒಂದೇ ದಿನದಲ್ಲಿ ಅನಾರೋಗ್ಯದಿಂದ ಅಲ್ಲಿಂದ ಮನೆಗೆ ವಾಪಸ್​ ಬಂದಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಮತ್ತೆ ಮನೆಯೊಳಗೆ ಹೋಗುತ್ತಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ರವಿ ಬೆಳಗೆರೆ ಅವರಿಗೆ ಲೋ ಬಿಪಿ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅವರನ್ನು ಆಂಬುಲೆನ್ಸ್ ಮೂಲಕ ಅವರ ಪದ್ಮನಾಭ ನಗರದ ಮನೆಗೆ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹೊಸ ವಿಷಯವೊಂದು ಹೊರಬಿದ್ದಿದ್ದು, ರವಿ ಬೆಳಗೆರೆ ಬಿಗ್​ ಬಾಸ್​ಗೆ ವಿಶೇಷ ಅತಿಥಿಯಾಗಿ ಹೋಗಿದ್ದರಂತೆ. ಅವರು ಯಾವಾಗ ನಿರ್ಧರಿಸುತ್ತಾರೋ ಆಗ ಮತ್ತೆ ಮನೆಯೊಳಕ್ಕೆ ತೆರಳಬಹುದಂತೆ.

ಹಾಗಾಗಿ ರವಿ ಬೆಳಗೆರೆಯವರು ನಾಳೆಯಷ್ಟರಲ್ಲಿ ಮತ್ತೊಮ್ಮೆ ದೊಡ್ಡಮನೆ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *