46 ವರ್ಷ ಬಳಿಕ ತೆರೆದ ರತ್ನಭಂಡಾರ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ನೆಲಮಾಳಿಗೆಯಲ್ಲಿರುವ, ಅಪಾರ ಪ್ರಮಾಣದ ಚಿನ್ನ-ಬೆಳ್ಳಿ-ವಜ್ರದ ಆಭರಣಗಳಿರುವ ‘ರತ್ನಭಂಡಾರ’ದ ಕೊಠಡಿಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು. ರಾಜ್ಯದ ಬಿಜೆಪಿ ಸರ್ಕಾರ ನೇಮಕ ಮಾಡಿರುವ 12 ಸದಸ್ಯರ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ 1.28ಕ್ಕೆ ಸರಿಯಾಗಿ ರತ್ನಭಂಡಾರವನ್ನು ತೆರೆದರು. ಮಂಗಳಕರ ಎನ್ನಲಾದ ಈ ಸಮಯವನ್ನು (1.28) ಬೆಳಗ್ಗೆ ನಡೆದ ಸಭೆಯೊಂದರಲ್ಲಿ ತೀರ್ವನಿಸಲಾಗಿತ್ತು. ಸಮಿತಿ ಅಧ್ಯಕ್ಷರೂ ಆಗಿರುವ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ … Continue reading 46 ವರ್ಷ ಬಳಿಕ ತೆರೆದ ರತ್ನಭಂಡಾರ