ಬೆಂಗಳೂರು: ವಿಧಾನಸೌಧದ ಮುಂಭಾಗ ಫೆ.2ರಂದು ಯೋಗ ಗಂಗೋತ್ರಿ ಸಂಸ್ಥೆ ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ‘ರಥಸಪ್ತಮಿ ಯೋಗ ಉತ್ಸವ 2020’ ಕಾರ್ಯಕ್ರಮ ಆಯೋಜಿಸಿದೆ.
ಬೆಳಗ್ಗೆ 6.30ರಿಂದ 8.30 ರವರೆಗೆ ಸೂರ್ಯ ನಮಸ್ಕಾರ, ಯೋಗ ಪ್ರದರ್ಶನ, ಸತ್ಸಂಗ ಯೋಗ ಪ್ರದರ್ಶನ ಮಾಡಲಾಗುತ್ತದೆ.
2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಶ್ರೀರಾಮುಲು, ಯೋಗ ಗಂಗೋತ್ರಿ ಮುಖ್ಯಸ್ಥ ಆರಾಧ್ಯ, ಎಸ್. ವ್ಯಾಸ ವಿವಿಯ ಕುಲಾಧಿಪತಿ ಡಾ. ಎಚ್.ಆರ್. ನಾಗೇಂದ್ರ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಯೋಗ ಗಂಗೋತ್ರಿ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನಂ, ಆರ್.ವಿ. ದೇವರಾಜ್ ಸೇವಾ ಪ್ರತಿಷ್ಠಾನ ಸಮತ್ವಂ ಯೋಗ ಉಚ್ಯತೆ, ಸುಯೋಗ, ನೆಮ್ಮದಿ ಸ್ಕೂಲ್ ಆಫ್ ಯೋಗ, ವಿಶ್ವಚೇತನ ಸ್ಕೂಲ್ ಆಫ್ ಯೋಗ, ಲರ್ನ್ ಯೋಗ ಸ್ಟೇ ಹೆಲ್ದೀ, ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಆದಿತ್ಯ ಸ್ಕೂಲ್ ಆಫ್ ಯೋಗ, ರೇಡಿಯೋ ಸಿಟಿ, ಆಯುಷ್ ಇಲಾಖೆ ಸಹಯೋಗದಲ್ಲಿ ‘ರಥಸಪ್ತಮಿ ಯೋಗ ಉತ್ಸವ 2020’ ಆಯೋಜನೆಗೊಳ್ಳುತ್ತಿದೆ.
ಉಚಿತ ಪಾಸ್
ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿರುವ ವಿಜಯವಾಣಿ ಕಚೇರಿಯಲ್ಲಿ ಉಚಿತ ಪಾಸ್ಗಳು ಲಭ್ಯವಿರುತ್ತವೆ. ಸಂಪರ್ಕ080-2625 7400