25.7 C
Bangalore
Sunday, December 15, 2019

ಅಡಕೆಗೆ ಹೊಸ ವರ್ಷದ ಶುಭ ಆರಂಭ!

Latest News

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

<ಎರಡು ವರ್ಷ ಬಳಿಕ ಉತ್ತಮ ಧಾರಣೆ * ಕೆ.ಜಿ. ಧಾರಣೆ 240 ರೂ.>

ಶ್ರವಣ್‌ಕುಮಾರ್ ನಾಳ ಪುತ್ತೂರು
ಅಡಕೆ ಮಾರುಕಟ್ಟೆ ಕೊನೆಗೂ ಚೇತರಿಕೆ ಲಕ್ಷಣ ತೋರಿಸಿದೆ. ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹೊಸ ಅಡಕೆಗೆ (ಈ ಬಾರಿಯ ಕೊಯ್ಲಿನದ್ದು) ಉತ್ತಮ ಧಾರಣೆ ಕಂಡುಬರುತ್ತಿದೆ. ಅತ್ತ ಖಾಸಗಿ ವರ್ತಕರ ಮುಚ್ಚಿದ ಹಲವು ಗೋದಾಮುಗಳೂ ತೆರೆದುಕೊಳ್ಳುತ್ತಿವೆ.

ಕೊಳೆರೋಗ ಹಾಗೂ ಇಳುವರಿ ಕಡಿಮೆಯಾಗಿ ಬೇಡಿಕೆಯ ಆಧಾರದಲ್ಲಿ ಮಾರುಕಟ್ಟೆಗೆ ಪೂರೈಸಲು ಅಡಕೆ ಕೊರತೆ ಆಗಿರುವುದೇ ಧಾರಣೆ ಹೆಚ್ಚಳಕ್ಕೆ ಕಾರಣ ಎಂಬುವುದು ಕೃಷಿಕರ ವಾದ. ಆದರೆ ಮಾರುಕಟ್ಟೆ ತಜ್ಞರು, ಅಡಕೆ ಮಾರುಕಟ್ಟೆ ಕಳೆದ ಎರಡು ವರ್ಷಗಳಿಂದ ಪಾರದರ್ಶಕವಾಗಿ ನಡೆಯಲು ಸರ್ಕಾರ ಕೈಗೊಂಡ ನೀತಿಯೇ ಮಾರುಕಟ್ಟೆ ಚೇತರಿಕೆಗೆ ಕಾರಣ. ಈ ಧಾರಣೆ ದೀರ್ಘಾವಧಿವರೆಗೂ ಸ್ಥಿರತೆ ಕಾಯ್ದುಕೊಳ್ಳಲಿದೆ ಎಂಬುದಾಗಿ ವಿಶ್ಲೇಷಿಸಿದ್ದಾರೆ.

ಎರಡು ವರ್ಷದಲ್ಲೇ ಅಧಿಕ: ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಈ ಬಾರಿ ಎರಡು ಕೊಯ್ಲು ಮುಗಿದಿದೆ. ಹಿಂದೆಲ್ಲ ಅಂಗಳ ಭರ್ತಿಯಾಗುತ್ತಿದ್ದ ಅಡಕೆ ಈ ಬಾರಿ ಅರ್ಧ ಅಂಗಳಕ್ಕೂ ಹರಡಿಲ್ಲ. ನಿಗದಿತ ಸಮಯಕ್ಕಿಂತ ಮುಂಚೆಯೇ ಕೊಯ್ಲು ಆಗುತ್ತಿದೆ. ಒಟ್ಟಾರೆ ಅಡಕೆ ಬೆಳೆ ಈ ಬಾರಿ ಆಶಾದಾಯಕವಾಗಿಲ್ಲ.
2014ರ ಆರಂಭದಲ್ಲಿ ಹೊಸ ಅಡಕೆ (ಹೊಸ ಕೊಯ್ಲು) ಧಾರಣೆ 242 ರೂಪಾಯಿ ತಲುಪಿತ್ತು. 2015ರಲ್ಲಿ 200 ರೂ, 2016ರಲ್ಲಿ 250 ರೂ., 2017ರಲ್ಲಿ 180 ರೂ., 2018ರಲ್ಲಿ 220 ರೂ. ಆಸುಪಾಸಿನ ಧಾರಣೆ ಲಭಿಸಿದೆ. ಆದರೆ 2019ರ ಆರಂಭದಿಂದ ಏರುಗತಿಯಲ್ಲಿ ಸಾಗಿದ ಹೊಸ ಅಡಕೆ ಮಾರುಕಟ್ಟೆ ಧಾರಣೆ ಈಗ 240 ರೂ. ತಲುಪಿದೆ. ಇದು ಎರಡು ವರ್ಷಗಳ ಬಳಿಕ ದಾಖಲಾಗಿರುವ ಅತ್ಯಧಿಕ ಧಾರಣೆ.

ಈ ಬಾರಿ 250ರ ಗಡಿ ದಾಟಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿದೆ. ಮಾರುಕಟ್ಟೆ ತಜ್ಞರು ಹೇಳುವಂತೆ ಮೇ ತಿಂಗಳಲ್ಲಿ ಈ ಧಾರಣೆ 270 ರೂ. ದಾಟಬಹುದು ಎನ್ನುತ್ತಾರೆ.

ಮುಕ್ತ ಮಾರುಕಟ್ಟೆಯಲ್ಲಿ ಮಂದಹಾಸ: ಜಿಎಸ್‌ಟಿ ಆರಂಭದಿಂದ ಮುಕ್ತ ಮಾರುಕಟ್ಟೆಯಲ್ಲಿ ಅಡಕೆ ವ್ಯವಹಾರ ಬಹುತೇಕ ಸ್ಥಗಿತಗೊಂಡಿತ್ತು. ಎಪಿಎಂಸಿ ಹಾಗೂ ಕ್ಯಾಂಪ್ಕೊ ಪಾರದರ್ಶಕ ವ್ಯವಹಾರ ನಡೆಸುವುದರಿಂದ ಗುಜರಾತಿನ ಅಡಕೆ ಸಿದ್ಧವಸ್ತು ಉತ್ಪನ್ನ ಘಟಕಗಳು ಈ ಸಂಸ್ಥೆಗಳಿಂದಲೇ ಅಡಕೆ ಖರೀದಿಸಿವೆ. ಎಪಿಎಂಸಿ ಹಾಗೂ ಕ್ಯಾಂಪ್ಕೊ ಅಡಕೆ ಮಾರಾಟ ಮಾಡಿದಾಗ ಸಿಗುವ ಬೆಲೆ ಮುಕ್ತ ಮಾರುಕಟ್ಟೆಯ ವರ್ತಕರಿಗೆ ಸಿಗುತ್ತಿರಲಿಲ್ಲ. ಇದರಿಂದಾಗಿ ಖರೀದಿಸಿದ ಅಡಕೆಯನ್ನು ಗುಜರಾತಿನ ಕಂಪನಿಗಳಿಗೆ ಮಾರಾಟ ಮಾಡುವುದು ವರ್ತಕರಿಗೆ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ಬಹುತೇಕ ಅಡಕೆ ಶೇಖರಣಾ ಗೋದಾಮುಗಳು ಮುಚ್ಚಿದ್ದವು. ಎಪಿಎಂಸಿ ಹಾಗೂ ಕ್ಯಾಂಪ್ಕೊಗಳಿಂದ ಕಂಪನಿಗಳ ಬೇಡಿಕೆಯಷ್ಟೇ ಅಡಕೆ ಪೂರೈಕೆಯಾಗುವುದರಿಂದ ಬೆಲೆ ಸ್ಥಿರವಾಗಿದೆ ಎಂಬುದು ಎಪಿಎಂಸಿ ವಾದ. ಆದರೆ ಈಗ ಮುಕ್ತ ಮಾರುಕಟ್ಟೆಯಲ್ಲೂ ಪಾರದರ್ಶಕ ವ್ಯವಹಾರಕ್ಕೆ ಹಾದಿ ಸುಗಮವಾಗಿದೆ. ಹಿಂದಿನಂತೆ ಮತ್ತೆ ಗುಜರಾತ್ ಸಂಸ್ಥೆಗಳು ಮುಕ್ತ ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸಿದ್ದರಿಂದ ಮುಕ್ತ ಮಾರುಕಟ್ಟೆಯಲ್ಲೂ ಅಡಕೆಗೆ ಬೇಡಿಕೆ ಆರಂಭವಾಗಿದೆ.

ಮಾರುಕಟ್ಟೆಯಲ್ಲಿ ಅಡಕೆ ಕೊರತೆಯಾದಾಗ ಬೆಲೆ ಜಾಸ್ತಿ ಮಾಡಿ ಅಡಕೆಯನ್ನು ಮಾರುಕಟ್ಟೆಗೆ ಬರಿಸುವ ತಂತ್ರ ಇದು. ಜತೆಗೆ ಕೊಳೆರೋಗದಿಂದ ಈ ಬಾರಿ ಅಡಕೆ ಇಳುವರಿ ಕಡಿಮೆಯಾಗಿದ್ದರಿಂದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ.
– ಡಾ.ವಿಘ್ನೇಶ್ವರ ವರ್ಮುಡಿ, ಕೃಷಿ ಮಾರುಕಟ್ಟೆ ತಜ್ಞ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...