More

    ರಸ್ತೆಯಲ್ಲಿ ಧಾನ್ಯ ಒಕ್ಕಣೆ ಮಾಡುವುದು ಅಪರಾಧ – ಕೃಷಿ ಇಲಾಖೆಯಿಂದ ರೈತರಿಗೆ ಅರಿವು ಕಾರ್ಯಕ್ರಮ

    ಕೈಲಾಂಚ: ರಸ್ತೆಯಲ್ಲಿ ಒಕ್ಕಣೆ ಮಾಡುವುದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿ ಗ್ರಾಮದಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಬುದವಾರ ನಡೆಯಿತು.

    ಜಿಲ್ಲಾ ಪಂಚಾಯಿತಿ, ರಾಮನಗರ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಕೈಲಾಂಚ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಮತ್ತು ಆತ್ಮ ಯೋಜನೆ ಅಧಿಕಾರಿಗಳು ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಮನೆ ಮನೆ ಪ್ರಚಾರ ನಡೆಸಿ, ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ರೈತರನ್ನು ಸಂಪರ್ಕಿಸಿ ಬಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡಿದರು.

    ರಾಮನಗರ ತಾಲೂಕು ಸಹಾಯಕ ಕೃಷಿ ಅಧಿಕಾರಿ ಪರಮೇಶ್ ಮಾತನಾಡಿ, ರೈತರು ಇತ್ತೀಚೆಗೆ ಕಣದಲ್ಲಿ ಒಕ್ಕಣೆ ಮಾಡುವುದನ್ನು ಬಿಟ್ಟಿದ್ದಾರೆ. ಗ್ರಾಮದ ರಸ್ತೆಗಳಲ್ಲೇ ಹುರುಳಿ, ರಾಗಿ ಹರಡಿ ಒಕ್ಕಣೆ ಆರಂಭಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ತೊಂದರೆ ಆಗುವುದಲ್ಲದೆ, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
    ರಸ್ತೆ ಮೇಲೆ ಒಕ್ಕಣೆ ಮಾಡುವುದರಿಂದ ಶೇ.8ರಿಂದ 10ರಷ್ಟು ಧಾನ್ಯ ನಷ್ಟವಾಗುತ್ತದೆ. ವಾಹನಗಳ ಟೈರ್‌ನಲ್ಲಿರುವ ಕ್ಯಾನ್ಸರ್‌ಕಾರಕ ರಾಸಾಯನಿಕ ಧಾನ್ಯದೊಂದಿಗೆ ಬೆರೆಯುತ್ತದೆ. ಇದರಿಂದ ಜನ ಮತ್ತು ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಎದುರಾಗತ್ತದೆ. ಕೂಡಲೇ ರೈತರು ರಸ್ತೆ ಮೇಲೆ ಒಕ್ಕಣೆ ನಿಲ್ಲಿಸಿ ಜಮೀನಿನಲ್ಲಿ ಕಣ ಮಾಡಿ ಧಾನ್ಯ ಒಕ್ಕಣೆ ಮಾಡಬೇಕು ಎಂದು ತಿಳಿಸಿದರು.

    ಕೈಲಾಂಚ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ. ಪ್ರದೀಪ್ ಮಾತನಾಡಿ, ರಸ್ತೆ ಮೇಲೆ ಒಕ್ಕಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ರೈತರೆಲ್ಲ ಸೇರಿ ಒಂದೆಡೆ ಕಣ ಮಾಡಿ ಪರಸ್ಪರ ಸಹಕಾರದಿಂದ ಒಕ್ಕಣೆ ಮಾಡಬೇಕು ಎಂದು ಮನವಿ ಮಾಡಿದರು.

    ಲಕ್ಕೋಜನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಪ್ರೇಮಲತಾ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ರೇಖಾ, ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ರೂಪಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯರಾದ ಶುಭಾ, ಸುಂದ್ರಮ್ಮ, ಸಹಾಯಕ ಕೃಷಿ ಅಧಿಕಾರಿ ಲಿಂಗಪ್ಪ, ಶಿಕ್ಷಕರಾದ ರಾಧಾಮಣಿ, ವಿಜಯಕುಮಾರ್, ರಾಜಶೇಖರ್, ಅನುರಾಧ, ಯೋಗಿತಾ, ಪಾಪಣ್ಣ, ಮಾಧವಿ ಕುವರಿ, ಶರ್ಮಿಳಾ ರೈತ ಮುಖಂಡರಾದ ಎಲ್.ಎಂ. ಸಂತೋಷ್, ಜಯಣ್ಣ, ಕೃಷ್ಣೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts