More

  ಅವಕಾಶ ಸಿಕ್ಕರೆ ದೀಪಿಕಾ ಪಡುಕೋಣೆ ಅವರ ಕಪಾಟಿಗೆ ಕನ್ನ ಹಾಕುತ್ತೇನೆ! ರಶ್ಮಿಕಾ ಹೀಗೆನ್ನಲು ಕಾರಣವೇನು?

  ನವದೆಹಲಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆಯಿರುವ ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರಾಗಿದ್ದ, ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಫ್ಯಾಷನ್, ವಿಭಿನ್ನ ಶೈಲಿಯ ಉಡುಪಿನ ಕಾರಣಕ್ಕೆ ರಶ್ಮಿಕಾ ಮಂದಣ್ಣ ಹೆಸರು ಹೆಚ್ಚು ಚಾಲ್ತಿಯಲ್ಲಿರುತ್ತದೆ.

  ರಶ್ಮಿಕಾ ಮಂದಣ್ಣ ಸಿನಿಮಾ ನಟನೆಯ ಹೊರತಾಗಿ ಖಾಸಗಿ ಕಾರ್ಯಕ್ರಮಗಳು, ವಿದೇಶಿ ಪ್ರವಾಸ, ಜಾಹೀರಾತು, ಬ್ರ್ಯಾಂಡಿಂಗ್ ಕಾರಣಕ್ಕೆ ಹೆಚ್ಚು ಓಡಾಟದಲ್ಲಿರುತ್ತಾರೆ. ಪ್ರತಿ ಬಾರಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಾಗಲೂ ವಿಭಿನ್ನ ಶೈಲಿಯ ಉಡುಪಿನಲ್ಲಿ ಗಮನ ಸೆಳೆಯುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ಫ್ಯಾಷನ್ ಬಗೆಗಿನ ಒಲವನ್ನು ಬಿಚ್ಚಿಟ್ಟಿದ್ದಾರೆ.

  ಇದನ್ನೂ ಓದಿ: ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಶವ ಪತ್ತೆ ಪ್ರಕರಣ; ಹತ್ಯೆಗೀಡಾದ ಮಹಿಳೆ ಯಾರೆಂದು ಪತ್ತೆ ಮಾಡಿದ ಪೊಲೀಸರು

  ನಾನು ಆರಾಮದಾಯಕವಾಗಿರುವ ಬಟ್ಟೆಗಳನ್ನು ಧರಿಸಲು ಹೆಚ್ಚು ಇಷ್ಟು ಪಡುತ್ತೇನೆ. ಅಂತಿಮವಾಗಿ ತೊಡುವ ಬಟ್ಟೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುವಂತಿರಬೇಕು. ವಾಸ್ತವದಲ್ಲಿ ನನಗೆ ಫ್ಯಾಷನ್ ಬಗೆಗಿನ ಜ್ಞಾನ ಕಡಿಮೆ. ದಿನದಿಂದ ದಿನಕ್ಕೆ ಸರಳವಾದ ಉಡುಪು ಧರಿಸಲು ಹೆಚ್ಚು ಇಷ್ಟವಾಗುತ್ತದೆ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

  ಇದೇ ವೇಳೆ ರಶ್ಮಿಕಾ ಮಂದಣ್ಣ ಮಾತನಾಡುತ್ತಾ, ಅವಕಾಶ ಸಿಕ್ಕರೆ ದೀಪಿಕಾ ಪಡುಕೋಣೆ ಅವರ ಕಪಾಟಿಗೆ ದಾಳಿ ಮಾಡುತ್ತೇನೆ. ನಾನು ದೀಪಿಕಾ ಪಡುಕೋಣೆ ಅವರ ಫ್ಯಾಷನ್ ಶೈಲಿಯನ್ನು ಇಷ್ಟವಾಗುತ್ತದೆ. ಹೆಚ್ಚಾಗಿ ಅವರ ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

  ಇದನ್ನೂ ಓದಿ: ರೈಲ್ವೇ ನಿಲ್ದಾಣದಲ್ಲಿ ಶವ ಪತ್ತೆ ಪ್ರಕರಣ | ಮೂವರ ಬಂಧನ; ಪೊಲೀಸರಿಗೆ ಹಂತಕರ ಸುಳಿವು ನೀಡಿದ್ದು ಡ್ರಮ್ ಮೇಲಿದ್ದ ಸ್ಟಿಕ್ಕರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts