ಕಿಸ್ಸಿಂಗ್ ಪುರಾಣದ ಬಗ್ಗೆ ಬಾಯ್ಬಿಟ್ಟ ಕಿರಿಕ್ ಬ್ಯೂಟಿ: ಟ್ರೋಲಿಗರಿಗೆ ರಶ್ಮಿಕಾ ತಿರುಗೇಟು

ಬೆಂಗಳೂರು: ಗೀತ ಗೋವಿಂದಂ ಚಿತ್ರದ ಮೂಲಕ ಕಾಲಿವುಡ್​ಗೆ ಕಾಲಿಟ್ಟು ಮೊದಲ ಚಿತ್ರದಲ್ಲೇ ತೆಲುಗು ಚಿತ್ರರಂಗದ ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದ ನಟಿ ರಶ್ಮಿಕಾ ಮಂದಣ್ಣ, ನಟ ವಿಜಯ ದೇವರಕೊಂಡ ಜತೆ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಇದೀಗ ಮತ್ತೆ ವಿಜಯ್​ ಜತೆ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ಬೆನ್ನಲ್ಲೇ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.

ವಿಜಯ ಜತೆ ಮತ್ತೆ ‘ಡಿಯರ್​ ಕಾಮ್ರೆಡ್​’ ಚಿತ್ರದಲ್ಲಿ ಜತೆಯಾಗಿರುವ ನಟಿ ರಶ್ಮಿಕಾ ಮತ್ತೊಮ್ಮೆ ಲಿಪ್​ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಚಿತ್ರದ ಟೀಸರ್​ ಮೊನ್ನೆ ಬಿಡುಗಡೆಯಾಗಿದ್ದು, ಕಿಸ್ಸಿಂಗ್​ ದೃಶ್ಯ​ವನ್ನು ಟ್ರೋಲಿಗರು ಸಾಕಷ್ಟು ಟ್ರೋಲ್​ ಮಾಡಿದ್ದಾರೆ.

ಇದಕ್ಕೆ ತೆಲುಗು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ಚಿಕ್ಕ ಟೀಸರ್ ನೋಡಿ ಒಂದು ನಿರ್ಣಯಕ್ಕೆ ಬರುವುದು ಸರಿಯಲ್ಲ. ಕತೆ ಡಿಮ್ಯಾಂಡ್ ಮಾಡಿದ್ದರಿಂದಲೇ ಆ ದೃಶ್ಯದಲ್ಲಿ ನಟಿಸಿದ್ದೇನೆ ಎಂದಿದ್ದಾರೆ. ಅಲ್ಲದೆ, ಮೇ ತಿಂಗಳಲ್ಲಿ ಪೂರ್ತಿ ಸಿನಿಮಾ ನೋಡಿ, ಆ ನಂತರ ಕಿಸ್ಸಿಂಗ್​ ದೃಶ್ಯದ ಬಗ್ಗೆ ಹೇಳಿ ಎಂದು ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ.​

ಈ ಹಿಂದೆ ಗೀತ ಗೋವಿಂದ ಚಿತ್ರದಲ್ಲಿಯೂ ಲಿಪ್​ಲಾಕ್​ ದೃಶ್ಯವಿತ್ತು. ಬಳಿಕ ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಇದರ ಬೆನ್ನಲ್ಲೇ ನಟ ರಕ್ಷಿತ್​ ಶೆಟ್ಟಿ ಜತೆ ನೆರವೇರಿದ್ದ ನಿಶ್ಚಿತಾರ್ಥ ಮುರಿದುಬಿದ್ದಿದ್ದು ಇದೇ ಕಾರಣ ಎಂದು ಹೇಳಲಾಗಿತ್ತು. ಈ ಮಧ್ಯೆ ರಶ್ಮಿಕಾ ಹಾಗೂ ವಿಜಯ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂಬ ವಿಚಾರವೂ ಹರಿಡಾಡಿತ್ತು. (ಏಜೆನ್ಸೀಸ್​)

One Reply to “ಕಿಸ್ಸಿಂಗ್ ಪುರಾಣದ ಬಗ್ಗೆ ಬಾಯ್ಬಿಟ್ಟ ಕಿರಿಕ್ ಬ್ಯೂಟಿ: ಟ್ರೋಲಿಗರಿಗೆ ರಶ್ಮಿಕಾ ತಿರುಗೇಟು”

  1. ಭಲೇ ಕನ್ನಡತಿ !! ನೀ ಯಾಕಿಂಗಾಡ್ತಿ ?! – ಗುಂಜಮಂಜ (gunjmanja)

Comments are closed.