Video Viral: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಬ್ಬರೂ ಎರಡು ಸಿನಿಮಾಗಳಲ್ಲಿ ನಟಿಸಿದ್ದು ಅಂದಿನಿಂದ ಅವರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಕೆಲವರು ಅದು ಕೇವಲ ಸ್ನೇಹ ಎಂದು ಹೇಳುತ್ತಾರೆ, ಆದರೆ ಕೆಲವರು ಸ್ನೇಹಕ್ಕಿಂತ ಹೆಚ್ಚಿನದು ಇದೆ ಎಂದು ಹೇಳುತ್ತಾರೆ. ಅದೇನೇ ಇರಲಿ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಯಾವಾಗಲೂ ರಹಸ್ಯ ಪ್ರವಾಸಗಳನ್ನು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಪೋಸ್ಟ್ ಮಾಡಿರುವ ಫೋಟೋಗಳನ್ನು ನೀವು ಸ್ಪಷ್ಟವಾಗಿ ನೋಡಿದರೆ, ರಶ್ಮಿಕಾ ಹಂಚಿಕೊಂಡ ಫೋಟೋಗಳ ಉಲ್ಲೇಖಗಳಿವೆ. ಆದರೆ ಇಬ್ಬರು ಈ ರೀತಿ ರಹಸ್ಯ ಪ್ರವಾಸ ಮಾಡುವುದು ಸರ್ವೇಸಾಮಾನ್ಯ.
ಇತ್ತೀಚೆಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮತ್ತೊಂದು ಜಾಲಿ ಟ್ರಿಪ್ ಹೊರಟಿದ್ದಾರೆ ಎನ್ನಲಾಗಿದೆ. ರಶ್ಮಿಕಾ , ವಿಜಯ್ ಮುಂಬೈ ಏರ್ಪೋರ್ಟ್ಗೆ ಪ್ರತ್ಯೇಕವಾಗಿ ಬಂದಿದ್ದಾರೆ. ಆದರೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಒಟ್ಟಿಗೆ ಬಂದರೆ ಮಾಧ್ಯಮಗಳು ಆಡಿಕೊಳ್ಳಲಿದೆ ಎಂದು ಇಬ್ಬರು ಬೇರೆ.. ಬೇರೆಯಾಗಿ ಬಂದಿದ್ದಾರೆ. ಈ ವಿಡಿಯೋವನ್ನು ಪಾಪರಾಜಿ ಫೋಟೋಗ್ರಾಫರ್ಗಳು ಸೆರೆ ಹಿಡಿದಿದ್ದಾರೆ.
ಇಬ್ಬರು ಒಟ್ಟಿಗೆ ಟ್ರಿಪ್ ಹೋಗಿದ್ದಾರೋ.. ಇಬ್ಬರು ಬೇರೆ ಬೇರೆ ಜಾಗಗಳಿಗೆ ಹೋಗಿದ್ದಾರೋ ಗೊತ್ತಿಲ್ಲ. ಅದೇನೇ ಇರಲಿ, ಇವರಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ.
ಕೆಲ ದಿನಗಳಿಂದ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ವಿಜಯ್ ಅವರು ತಾವು ಸಂಬಂಧದಲ್ಲಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಅವರು ರಶ್ಮಿಕಾ ಹೆಸರನ್ನು ಹೇಳಿಲ್ಲ.
ವಿಜಯ್ ಪ್ರಸ್ತುತ ಗೌತಮ್ ತಿನ್ನನೂರಿ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ರಶ್ಮಿಕಾ ಪ್ರಸ್ತುತ ಪುಷ್ಪ 2 ಹಿಟ್‌ನೊಂದಿಗೆ ಫುಲ್ ಸ್ವಿಂಗ್‌ನಲ್ಲಿದ್ದಾರೆ.