23.2 C
Bangalore
Saturday, December 14, 2019

ಅಪ್ರಾಪ್ತೆ ಅತ್ಯಾಚಾರಿಗೆ 10 ವರ್ಷ ಜೈಲು

Latest News

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಮೆಟ್ರೋಗೆ ಹಾರಿ ಗಂಡ ಮೃತಪಟ್ಟ ಒಂದು ಗಂಟೆಯಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡ ಹೆಂಡತಿ, ಮಗಳು!

ನವದೆಹಲಿ: ಗಂಡ ಮೆಟ್ರೋಗೆ ಹಾರಿ ಮೃತಪಟ್ಟ ಗಂಟೆಯೊಳಗೆ ಮನೆಯಲ್ಲಿ ಹೆಂಡತಿ ಮತ್ತು ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ದೆಹಲಿಯ ಜವಹರ ಲಾಲ್​ ನೆಹರು ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ...

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುಳ್ಯ ಠಾಣಾ ವ್ಯಾಪ್ತಿಯ ಜಾಲ್ಸೂರಿನಲ್ಲಿ 2015ರ ಸೆ.8ರಂದು ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಕೃಷ್ಣ ಪಿ.ಆರ್(23) ಎಂಬಾತನಿಗೆ ಎರಡನೇ ಹೆಚ್ಚುವರಿ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ: ಅಪರಾಧಿ ಕೃಷ್ಣ ಸೆ.8ರಂದು ಮಧ್ಯಾಹ್ನ 1.30ರ ವೇಳೆಗೆ ಸಂತ್ರಸ್ತ ಅಪ್ರಾಪ್ತ ಬಾಲಕಿಯ ಮನೆಗೆ ಯಾರೂ ಇಲ್ಲದಿದ್ದಾಗ ಪ್ರವೇಶಿಸಿ, ಮದುವೆಯಾಗುವುದಾಗಿ ನಂಬಿಸಿ ಪುಸಲಾಯಿಸಿ, ಆಕೆ ಪ್ರತಿಭಟಿಸಿದರೂ ದೈಹಿಕ ಸಂಪರ್ಕ ನಡೆಸಿದ್ದಾನೆ. ಇದಾದ ಬಳಿಕ ಆಗಾಗ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಕಾರಣ ಆಕೆ ಗರ್ಭವತಿಯಾಗಿದ್ದಾಳೆ. ನಾಲ್ಕು ತಿಂಗಳು ಗರ್ಭಿಣಿಯಾದಾಗ ವೈದ್ಯರು ಬಾಲಕಿ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಗರ್ಭಪಾತ ನಡೆಸಿದ್ದಾರೆ. ಭ್ರೂಣದ ಡಿಎನ್‌ಎ ಪರಿಶೀಲನೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪಾಸಿಟಿವ್ ರಿಪೋರ್ಟ್ ಬಂದಿದೆ.

ಬಾಲಕಿಗೆ ಪರಿಹಾರ: ಆರೋಪಿಗೆ ಐಪಿಸಿ ಕಲಂ 376ರ ಅಡಿಯಲ್ಲಿ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಮತ್ತು ಪೋಕ್ಸೋ ಕಾಯ್ದೆ ಕಲಂ 6ರಡಿ 10 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. ತಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು. 10 ಸಾವಿರ ರೂ.ದಂಡದಲ್ಲಿ 7,500 ರೂ. ನೊಂದ ಬಾಲಕಿಗೆ ನೀಡಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಪ್ರಕಟಿಸಿದೆ. ಹೆಚ್ಚಿನ ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಸೂಚನೆ ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.

17 ಸಾಕ್ಷಿದಾರರ ವಿಚಾರಣೆ:  ಬಾಲಕಿ ಮನೆಯವರು ನೀಡಿದ ದೂರಿನಂತೆ ಆಗಿನ ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಎಸ್., ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ 17 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ, ಭಾರತೀಯ ದಂಡ ಸಂಹಿತೆ ಕಲಂ 376 ಹಾಗೂ ಪೋಕ್ಸೋ ಕಾಯ್ದೆ ಕಲಂ 6ರ ಪ್ರಕಾರ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಮಾನಿಸಿದೆ.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...