ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಒಬ್ಬನ ಬಂಧನ

ಹುಕ್ಕೇರಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಸಾರಾಪುರ ಗಾಮದ ಯುವಕನನ್ನು ಹುಕ್ಕೇರಿ ಪೊಲೀರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ರಾಜು ಭೂಪಾಲ ಹಟ್ಟಿ (35) ಬಂಧಿತ. ಈತ ಸಾರಾಪುರ ಗ್ರಾಮದಲ್ಲಿ 8ನೇ ತರಗತಿ ಓದುತ್ತಿದ್ದ 14ರ ಬಾಲಕಿಯ ಮೇಲೆ ಮಾರ್ಚ್‌ನಿಂದ ಬಲವಂತದ ಸಂಬಂಧ ಬೆಳೆಸಿರುವುದು ವಿಚಾರಣೆ ವೇಳೆ ಬಯಲಾಗಿದೆ.

ಸಾರಾಪುರ ಗ್ರಾಮದ ಶಾಲೆಗೆ ಹೋಗುತ್ತಿದ್ದಾಗ ಬಾಲಕಿಯ ಬೆನ್ನು ಹತ್ತಿ ಕಾಡಿಸುತ್ತಿದ್ದ ಆರೋಪಿ ಮಾರ್ಚ್‌ನಲ್ಲಿ ಒಂದು ದಿನ ಅವಳ ಕಣ್ಣು ಮತ್ತು ಬಾಯಿಗೆ ಅರಿವೆ ಕಟ್ಟಿ ಹೊಲಕ್ಕೆ ಎಳೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದ. ನಂತರ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದ. ಜೀವ ಭಯದಿಂದ ಬಾಲಕಿ ಯಾರಿಗೂ ವಿಷಯ ತಿಳಿಸಿರಲಿಲ್ಲ.

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಅವಳ ತಾಯಿ ಘಟಪ್ರಭಾ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸುವ ವೇಳೆ ಬಾಲಕಿ ಗರ್ಭೀಣಿಯಾಗಿರುವುದು ಬೆಳಕಿಗೆ ಬಂದಿದೆ. ವಿಷಯ ಅರಿತುಕೊಂಡ ಬಾಲಕಿಯ ತಾಯಿ ಬುಧವಾರ ಹುಕ್ಕೇರಿ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.

ಹುಕ್ಕೇರಿ ಪೋಲಿಸರು ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದು, ತನಿಖೆ ಕೈಗೊಂಡಿದ್ದಾರೆ.