ಉಡಪಿ: ಲಾಕ್ಡೌನ್ ನಿರ್ಬಂಧಗಳನ್ನು ಕೂಡ ಪಾಪಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಹೀನಾಯ ಘಟನೆ ಸಾಕ್ಷಿ.
ದಿನಸಿ ಕಿಟ್ ಪಡೆದು ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದ ಮಹಿಳೆಗೆ ಲಿಫ್ಟ್ ಕೊಡುವುದಾಗಿ ನಂಬಿಸಿದ ಕಾಮುಕನೋರ್ವ ಕಾಡಿಗೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬ್ರಹ್ಮಾವರದ ಕುಂಜಾಲು ಜಂಕ್ಷನ್ ಬಳಿ ನಡೆದಿದೆ.
ಇದನ್ನೂ ಓದಿ: ಅಗ್ನಿಗೆ ಆಹುತಿಯಾಯ್ತು ಸಂಪೂರ್ಣ ಬೆಳೆ, ಮನೆ; ಲಾಕ್ಡೌನ್ ಸಂಕಷ್ಟದ ನಡುವೆ ಸೂರು ಕಳೆದುಕೊಂಡು ಕಂಗಾಲಾಗಿರುವ ರೈತ
ಈ ಮಹಿಳೆ ಬ್ರಹ್ಮಾವರದಿಂದ ಸಂತೆಕಟ್ಟೆಗೆ ದಿನಸಿ ಕಿಟ್ ಪಡೆಯಲು ಬಂದಿದ್ದರು. ಕಿಟ್ ಪಡೆದು ವಾಪಸ್ ಹೋಗುತ್ತಿರುವಾಗ ಘಟನೆ ನಡೆದಿದೆ. ವಾಹನ ಸಂಚಾರ ಇಲ್ಲದ ಕಾರಣ ಮಹಿಳೆ ನಡೆದುಕೊಂಡೇ ಸಾಗುತ್ತಿದ್ದರು. ಆಗ ಬೈಕ್ನಲ್ಲಿ ಬಂದ ವ್ಯಕ್ತಿ, ಯಾಕೆ ನಡೆದು ಹೋಗುತ್ತೀರಿ..ನಾನು ಆ ಕಡೆಗೇ ಹೋಗುತ್ತಿದ್ದೇನೆ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ದೂರ ಹೋಗಿ ದಾರಿ ತಪ್ಪಿಸಿ ಮಹಿಳೆಯರನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.
VIDEO: ಮಹಾರಾಷ್ಟ್ರದಿಂದ ಹೊರಟಿತ್ತು ಈ ಟ್ರಕ್…ತಪಾಸಣೆಗೆಂದು ತಡೆದು ನಿಲ್ಲಿಸಿದ ಪೊಲೀಸರು ಫುಲ್ ಕಂಗಾಲು…!
ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿಯ ಪತ್ತೆಕಾರ್ಯ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)