ED seize : ನಟಿ ರನ್ಯಾರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಶುಕ್ರವಾರ ತಿಳಿಸಿದೆ.
ಇದನ್ನೂ ಓದಿ:ವಜ್ರ ಮಹೋತ್ಸವ ಹಿನ್ನೆಲೆ ರಾಯರ ಅಷ್ಟೋತ್ತರ ಸೇವೆ
ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ ಮತ್ತು ಸಹಚರರು ನಡೆಸಿದ ಅಂತರರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಮತ್ತು ಅದರ ಆದಾಯವನ್ನು ಅಕ್ರಮವಾಗಿ ವರ್ಗಾಯಿಸುವ ಪ್ರಕರಣದಲ್ಲಿ, ನವದೆಹಲಿಯ ಪ್ರಧಾನ ಕಚೇರಿ ತನಿಖಾ ಘಟಕ-II, ED, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಯ ನಿಬಂಧನೆಗಳ ಅಡಿಯಲ್ಲಿ ಒಟ್ಟು34.12 ಕೋಟಿ ರೂ, ಮೌಲ್ಯದ ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಸ್ಥಿರ ಆಸ್ತಿಗಳು ಸೇರಿವೆ ಎಂದು ED ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣ
ಆರ್ಥಿಕ ಅಪರಾಧ ತನಿಖಾ ಸಂಸ್ಥೆಯು ಇದುವರೆಗೆ ಕಳ್ಳಸಾಗಣೆಯಲ್ಲಿ 55 ಕೋಟಿ ರೂ. ಮೌಲ್ಯದ ಅಪರಾಧದ ಆದಾಯವನ್ನು ಗುರುತಿಸಿದೆ ಎಂದು ತಿಳಿಸಿದೆ.
ಪ್ರಕರಣ ಏನು..?
ಮಾ.3 ರಂದು ದುಬೈನಿಂದ ಬಂದ ನಂತರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅನ್ನು ಚಿನ್ನ ಕಳ್ಳಸಾಗಣಿಕೆ ಆರೋಪದ ಮೇಲೆ ಬಂಧಿಸಲಾಯಿತು. ಅಧಿಕಾರಿಗಳು 12.56 ಕೋಟಿ ರೂ.ಗೂ ಹೆಚ್ಚು ಮೌಲ್ಯದ 14.2 ಕೆಜಿ 24 ಕ್ಯಾರೆಟ್ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.(ಏಜೆನ್ಸೀಸ್)
ನನಗೆ ಏನು ಬೇಕೋ ಅದನ್ನು ದೇವರ ಬಳಿ ಪ್ರಾರ್ಥನೆ ಮಾಡಿದ್ದೇನೆ : DK ಶಿವಕುಮಾರ್