VIDEO| ಹಾಡೊಂದಕ್ಕೆ ಡಾನ್ಸ್​ ಮುಗಿಸಿ ಅಭಿಮಾನಿಗಳ ಮೇಲೆ ಹಾರಿದ ನಟ ರಣವೀರ್​ ಸಿಂಗ್​: ಹಲವರಿಗೆ ಗಾಯ

ಮುಂಬೈ: ವಾಣಿಜ್ಯ ನಗರಿಯಲ್ಲಿ ಭಾನುವಾರ ನಡೆದ ಲ್ಯಾಕ್​ಮಿ ಫ್ಯಾಶನ್​ ವೀಕ್​ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್​ನ ಯಂಗ್​ ಅಂಡ್​ ಎನರ್ಜಿಟಿಕ್​ ಸ್ಟಾರ್​ ರಣವೀರ್​ ಸಿಂಗ್​ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ಹೊರಾಂಗಣ ವೇದಿಕೆ ಮೇಲೆ ನಟ ರಣವೀರ್​ ಸಿಂಗ್​ ತಮ್ಮ ಮುಂದಿನ ಗಲ್ಲಿ ಬಾಯ್​ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಹಾಡು ಮುಗಿಯುತ್ತಿದ್ದಂತೆ ರಣವೀರ್​ ತಮ್ಮ ರ‍್ಯಾಪರ್​ ಟೋಪಿ ಹಾಗೂ ಸನ್​ ಗ್ಲಾಸ್​ ಅನ್ನು ಕಳಚಿಟ್ಟು ಯಾವುದೇ ಮುನ್ಸೂಚನೆ ನೀಡದೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ಗುಂಪಿನ ಮೇಲೆ ಹಾರಿದ್ದಾರೆ.

ಮೊದಲೇ ನೆಚ್ಚಿನ ನಟನನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದ ಅಭಿಮಾನಿಗಳು ರಣವೀರ್​ ಅವರ ಪ್ರದರ್ಶನವನ್ನು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಳ್ಳುವಲ್ಲಿ ನಿರತರಾಗಿದ್ದರು. ಈ ವೇಳೆ ಅವರ ಮೇಲೆಯೇ ರಣವೀರ್​ ಸಿಂಗ್​ ಜಂಪ್​ ಮಾಡಿದ್ದಾರೆ.

ಕೆಲವು ಪತ್ರಿಕೆಗಳ ವರದಿ ಪ್ರಕಾರ ಕೆಲವರು ಈ ಘಟನೆಯಿಂದ ಗಾಯಗೊಂಡಿದ್ದು, ಕೆಲವು ಮಹಿಳೆಯರು ನೆಲಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನಟನಾಗಿ ಬೆಳೆಯುತ್ತಿರುವ ರಣವೀರ್​ ಸಿಂಗ್​ ಅವರು ಇಂತಹ ಮಕ್ಕಳ ವರ್ತನೆಯನ್ನು ಬಿಡಬೇಕು ಎಂದು ಟೀಕಿಸಿದ್ದಾರೆ.

ಜೋಯಾ ಅಖ್ತರ್​​ ನಿರ್ದೇಶನದ ಗಲ್ಲಿ ಬಾಯ್ ಚಿತ್ರವು​ ಫೆ. 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದ್ದು, ಆಲಿಯ ಭಟ್​ ಹಾಗೂ ರಣವೀರ್​ ಸಿಂಗ್ ಒಟ್ಟಿಗೆ​ ತೆರೆ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)