Deepika Padukone : ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಂಪತಿ ಮುದ್ದಾದ ಮಗಳು ದುವಾ ಹುಟ್ಟಿ ಇಂದಿಗೆ 3 ತಿಂಗಳು ತುಂಬಿವೆ. ಇದೇ ಖುಷಿಯಲ್ಲಿ ದುವಾ ಅವರ ಅಜ್ಜಿ (ರಣವೀರ್ ಸಿಂಗ್ ಅವರ ತಾಯಿ), ಅಂಜು ಭವ್ನಾನಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮನೆಗೆ ಮಹಾಲಕ್ಷ್ಮಿ ಬಂದ ಸಂತೋಷದಲ್ಲಿರುವ ದುವಾ ಅಜ್ಜಿ ಅಂದ್ರೆ ರಣವೀರ್ ಸಿಂಗ್ ತಾಯಿ ಅಂಜು ಭವಾನಾನಿ, ಮೊಮ್ಮಗಳಿಗಾಗಿ ವಿಶೇಷ ಕೆಲಸ ಮಾಡಿದ್ದಾರೆ. ಮೊಮ್ಮಗಳಿಗೆ ಮೂರು ತಿಂಗಳಾದ ಸಂತೋಷದಲ್ಲಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಅಂಜು ಭವಾನಾನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ವಿಶೇಷ ದಿನವನ್ನು ಪ್ರೀತಿ ಮತ್ತು ಭರವಸೆಯೊಂದಿಗೆ ಸಂತೋಷದಿಂದ ಆಚರಿಸುತ್ತಿದ್ದೇವೆ. ದುವಾ ಬೆಳೆಯುತ್ತಿದ್ದು, ಸಂತೋಷ ಮತ್ತು ಸೌಂದರ್ಯವನ್ನು ನಾವು ಎಂಜಾಯ್ ಮಾಡ್ತಿದ್ದೇವೆ. ಈ ನನ್ನ ಸಣ್ಣ ಕಾರ್ಯ ಕಷ್ಟದ ಸಮಯದಲ್ಲಿರುವ ಯಾರಿಗಾದರೂ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಂಬಿದ್ದೇನೆ ಅಂತ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 8ರಂದು ಮುಂಬೈನ ಪ್ರತಿಷ್ಠಿತ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಡಿಸೆಂಬರ್ 8ರಂದು ದುವಾಗೆ ಮೂರು ತಿಂಗಳು ತುಂಬಿದೆ. ಇದನ್ನು ದೀಪಿಕಾ ಕುಟುಂಬ ಖುಷಿಯಿಂದ ಆಚರಿಸಿಕೊಂಡಿದೆ.