ಅನುಕರಣೆ ಒಳ್ಳೆಯದಲ್ಲ ಎಂದಿದ್ದ ಲತಾ ಮಂಗೇಶ್ಕರ್​ಗೆ ಬಡ ಗಾಯಕಿ ರಾಣು ಮಂಡಲ್​ ನೀಡಿದ ಪ್ರತಿಕ್ರಿಯೆ ಇದು…

ಮುಂಬೈ: ರೈಲ್ವೆ ಸ್ಟೇಶನ್​ನಲ್ಲಿ ಹಿಂದಿ ಹಾಡುಗಳನ್ನು ಹಾಡುತ್ತ ಭಿಕ್ಷೆ ಬೇಡುತ್ತಿದ್ದ ಬಡ ಗಾಯಕಿ ರಾಣು ಮಂಡಲ್​ ಈಗ ಬಾಲಿವುಡ್​ ಗಾಯಕಿಯೂ ಹೌದು!

ಹಿರಿಯ ಬಾಲಿವುಡ್ ಗಾಯಕಿ ಲತಾ ಮಂಗೇಶ್ಕರ್​ ಅವರು ಹಾಡಿದ್ದ ಹಾಡುಗಳನ್ನು ಹೆಚ್ಚಾಗಿ ಹಾಡುತ್ತಿದ್ದ ರಾಣು ಇತ್ತೀಚೆಗಂತೂ ತುಂಬಾ ಪ್ರಸಿದ್ಧರಾಗಿದ್ದಾರೆ. ರಾಣು ಬಗ್ಗೆ ಪ್ರತಿಕ್ರಿಯಿಸಿದ್ದ ಲತಾ ಮಂಗೇಶ್ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಅನುಕರಣೆ ಮಾಡುವುದು ಒಳ್ಳೆಯದಲ್ಲ ಎಂದಿದ್ದರು.

ರಾಣು ಅವರಿಗೆ ಹೀಗೆ ಕಿವಿಮಾತು ಹೇಳಿದ್ದ ಲತಾ ಮಂಗೇಶ್ಕರ್​ ವಿರುದ್ಧ ಅವರ ಅಭಿಮಾನಿಗಳೇ ಅಸಮಾಧಾನಗೊಂಡಿದ್ದರು. ಇದೀಗ ರಾಣು ಮಂಡಲ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ರಾಣು ಮಂಡಲ್​, ವಯಸ್ಸಿನಲ್ಲಿ ನಾನು ಲತಾ ಮಂಗೇಶ್ಕರ್​ಗಿಂತ ಚಿಕ್ಕವಳು. ಎಲ್ಲ ವಿಚಾರದಲ್ಲೂ ಅವರಿಗಿಂತ ಕಿರಿಯಳೇ. ಬಾಲ್ಯದಿಂದಲೂ ಲತಾಜೀ ಅವರ ಧ್ವನಿ ನನಗೆ ತುಂಬಾ ಇಷ್ಟ. ಅವರ ಗಾಯನ ನನಗೆ ಅಚ್ಚುಮೆಚ್ಚು ಎಂದಿದ್ದಾರೆ.

ರಾಣು ಅವರು ರಾಣಗಟ್​ ರೈಲ್ವೆಸ್ಟೇಶನ್​ನಲ್ಲಿ ಲತಾ ಮಂಗೇಶ್ಕರ್​ ಹಾಡಿದ್ದ ಏಕ್ ಪ್ಯಾರ್​ ಕಾ ನಗ್ಮಾ ಹೈ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್​ ಆದ ಬಳಿಕವೇ ಅವರು ಇಂಟರ್​ನೆಟ್​ ಸೆನ್ಸೇಶನ್​ ಆಗಿದ್ದರು. ಹಾಗೇ ಹಿಮೇಶ್​ ರಷ್ಮೀಯಾ ಅವರು ತಮ್ಮ ಸಿನಿಮಾದಲ್ಲೂ ಕೂಡ ರಾಣು ಅವರಿಂದ ಮೂರು ಹಾಡುಗಳನ್ನು ಹಾಡಿಸಿದ್ದಾರೆ.

3 Replies to “ಅನುಕರಣೆ ಒಳ್ಳೆಯದಲ್ಲ ಎಂದಿದ್ದ ಲತಾ ಮಂಗೇಶ್ಕರ್​ಗೆ ಬಡ ಗಾಯಕಿ ರಾಣು ಮಂಡಲ್​ ನೀಡಿದ ಪ್ರತಿಕ್ರಿಯೆ ಇದು…”

  1. ಲತಾ ಮಂಗೇಶ್ಕರ್ ಅವರಿಗೆ ಅರುಳುಮರುಳಾಗಿರುವುದರಿಂದ ಮನಸೋಯಿಚ್ಛೆ ಮಾತಾಡುತ್ತಿರಬಹುದು.

  2. ಲತಾ ಮಂಗೆಶ್ಕರ್ ಅವರು ಗಾಯಕಿ ಯಾಗಿ ದೊಡ್ಡ ಹೆಸರು ಮಾಡಿದ್ದಾರೆ ಬಿಟ್ಟ ರೆ ಮಾನವಿಯಾ ನೆಲೆಯಾ ಮನುಷ್ಯರಾಗಿ ಬದುಕಿ ಗೊತ್ತಿಲ್ಲ
    ರಾನು ಮಂಡಲ್ ಆ ತಾಯಿ ಗೆ ಸಪೋರ್ಟ್ ಮಾಡೊದು ಬಿಟ್ಟು
    ಇ ರಿತಿಯಾ

Leave a Reply

Your email address will not be published. Required fields are marked *