More

    ರ್ಯಾಂಕ್ ಪಡೆದರೂ ಕೆಲಸ ಸಿಗದ ಪರಿಸ್ಥಿತಿ-ಸಂವಾದ ಕಾರ್ಯಕ್ರಮ

    ಹೊಸಪೇಟೆ: ಉದ್ಯೋಗವೇ ಸೃಷ್ಟಿಯಿಲ್ಲದ ವ್ಯವಸ್ಥೆಯಲ್ಲಿ ರ‌್ಯಾಂಕ್ ಪಡೆದರೂ ಕೆಲಸ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಡಿವೈಒ ಸಂಘಟನೆಯ ಅಧ್ಯಕ್ಷ ನಿರಂಜನ್ ನಸ್ಕರ್ ಕಳವಳ ವ್ಯಕ್ತಪಡಿಸಿದರು.

    ನಗರದ ವಾಲ್ಮೀಕಿ ಐಟಿಐ ಕಾಲೇಜಿನಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಯಿಂದ ಸೋಮವಾರ ‘ಯುವಕರ ಸಮಸ್ಯೆಗಳು ಮತ್ತು ಬಿಡುಗಡೆಯ ದಾರಿ’ ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು. ಪಾಲಕರು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಆಸೆಯಿಂದ ಸಾಲ ಮಾಡಿ ಶಿಕ್ಷಣ ಕೊಡಿಸುತ್ತಾರೆ.

    ಇದನ್ನೂ ಓದಿ: ಯುವಕರ ಮುಂದಿನ ಭವಿಷ್ಯವೇನು?, ತಾಲೂಕು ಆಡಳಿತಸೌಧದ ಎದುರು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

    ಶಿಕ್ಷಣವಂತ ಯುವಕರಿಗೆ ಉದ್ಯೋಗ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಬದಲಾಗಿ ಉದ್ಯಮಿಗಳ ಸೇವೆಗೆ ನಿಂತಿವೆ. ನಿರುದ್ಯೋಗದಿಂದಾಗಿ ಕಡಿಮೆ ಕೂಲಿಯಲ್ಲಿ ಕೆಲಸ ಮಾಡುವಂತಾಗಿದೆ. ಸರ್ಕಾರ ಬದಲಾದರೂ ಉದ್ಯೋಗ ನೀತಿಗಳು ಬದಲಾಗುತ್ತಿಲ್ಲ ಎಂದರು.

    ಎಐಡಿವೈಒ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕುಮಾರ್ ಮಾತನಾಡಿ, ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು.

    ಸರ್ಕಾರವು ಗಲ್ಲಿಗೊಂದು ಮದ್ಯದ ಅಂಗಡಿಗೆ ಪರವಾನಗಿ, ಅಶ್ಲೀಲ ವೆಬ್‌ಸೈಟ್‌ಗಳ ಮೇಲೆ ನಿಯಂತ್ರಣ ಹೇರದಿರುವುದು ಮತ್ತು ಧರ್ಮದ ನಂಜು ಏರಿಸುವಂತಹ ಕೋಮುವಾದಿ ನೀತಿ ಪಾಲಿಸುತ್ತಿವೆ ಎಂದು ದೂರಿದರು.

    ಕಾರ್ಯಕ್ರಮಕ್ಕೂ ಮುನ್ನ ಸಿದ್ದಲಿಂಗಯ್ಯ ಅವರ ‘ನಿನ್ನೆ ದಿನ ನನ್ನ ಜನ’ ಕವನವನ್ನು ಪಾಲಾಕ್ಷ ಹಡಗಲಿ ಹಾಡಿದರು. ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಂಪಾಪತಿ, ಜಿಲ್ಲಾ ಉಪಾಧ್ಯಕ್ಷ ಎರ‌್ರಿಸ್ವಾಮಿ, ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್‌ಬಾಬು, ಅಜ್ಜಯ್ಯ ಸಂಡೂರು, ಕಲ್ಮೇಶ್, ಶರಣಮ್ಮ, ವಿನೋದ, ದಾವಲ್ ಮಲ್ಲಿಕ್, ಮುಸ್ತಫಾ, ಅಕ್ಷಯ್, ಆಸಿಫ್, ವಿಠ್ಠಲ್, ಹರ್ಷಾ, ರೋಹಿತ್, ಅನ್ವರ್ ಬಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts