ರಣಜಿ ಕ್ರಿಕೆಟ್ 3ನೇ ಪಂದ್ಯ: ಋತುವಿನ ಮೊದಲ ಗೆಲುವಿನ ಸನಿಹ ಕರ್ನಾಟಕ

ಮೈಸೂರು: ಆತಿಥೇಯ ಕರ್ನಾಟಕ ತಂಡ 85ನೇ ಆವೃತ್ತಿಯ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯ 3ನೇ ಪಂದ್ಯದಲ್ಲಿ ಪ್ರವಾಸಿ ಮಹಾರಾಷ್ಟ್ರ ತಂಡದ ಗೆಲುವಿನ ಸನಿಹಕ್ಕೆ ಬಂದಿದೆ. ಕರ್ನಾಟಕ ತಂಡ ಋತುವಿನ ಮೊದಲ ಜಯ ದಾಖಲಿಸಲು ಇನ್ನು 130 ರನ್​ ಗಳಿಸಿಬೇಕಿದೆ.

ಎರಡನೇ ದಿನದಾಟದಂತ್ಯಕ್ಕೆ 34 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 48 ರನ್​ ಗಳಿಸಿದ್ದ ಮಹಾರಾಷ್ಟ್ರ ತಂಡ ಮೂರನೇ ದಿನದಲ್ಲಿ ಉತ್ತಮ ಆಟವಾಡಿ ಎರಡನೇ ಇನಿಂಗ್ಸ್​ನಲ್ಲಿ 97 ಓವರ್​ಗಳಲ್ಲಿ 256 ರನ್​ ಗಳಿಸಿ ಆಲೌಟಾಯಿತು. ಗೆಲ್ಲಲು 184 ರನ್​ ಗುರಿ ಪಡೆದ ಕರ್ನಾಟಕ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 20 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 54 ರನ್​ ಗಳಿಸಿದೆ. ಕರ್ನಾಟದ ಪರ ಆರಂಭಿಕರಾದ ದೇವದತ್ತ ಪಡಿಕಲ್​ (33*) ಮತ್ತು ಡಿ. ನಿಶ್ಚಲ್​ (21*) ರನ್​ ಗಳಿಸಿದ್ದು ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ಇದಕ್ಕೂ ಮುನ್ನ ರುತುರಾಜ್​ ಗಾಯಕ್​ವಾಡ್​ (89) ಮತ್ತು ನೌಷಾದ್​ ಶೇಕ್​ (73) ಗಳಿಸಿದ ಜವಾಬ್ದಾರಿಯುತ ಅರ್ಧ ಶತಕಗಳ ನೆರವಿನಿಂದ ಮಹಾರಾಷ್ಟ್ರ ತಂಡ 250 ರ ಗಡಿ ದಾಟಿತು. ಉಳಿದಂತೆ ಎರಡನೇ ದಿನದಾಟದಂತ್ಯಕ್ಕೆ 4 ರನ್​ ಗಳಿಸಿದ್ದ ಸತ್ಯಜೀತ್​ ಬಚ್​ದೇವ್​ 28 ರನ್​ ಗಳಿಸಿ ಔಟಾದರು. ಕರ್ನಾಟಕದ ಪರ ಶ್ರೇಯಸ್​ ಗೋಪಾಲ್​ 64 ಕ್ಕೆ 4, ವಿನಯ್​ ಕುಮಾರ್​ 41 ಕ್ಕೆ 3 ಮತ್ತು ಪವನ್​ ದೇಶಪಾಂಡೆ 23 ಕ್ಕೆ 2 ವಿಕೆಟ್​ ಪಡೆದರು.

ಸಂಕ್ಷಿಪ್ತ ಸ್ಕೋರ್​:

ಮಹಾರಾಷ್ಟ್ರ: ಮೊದಲ ಇನಿಂಗ್ಸ್​ 39.4 ಓವರ್​ಗಳಲ್ಲಿ 113 ಕ್ಕೆ ಆಲೌಟ್​ (ರುತುರಾಜ್ ಗಾಯಕ್ವಾಡ್ 39, ರೋಹಿತ್ ಮೋಟ್ವಾನಿ 34, ಸುಚಿತ್.ಜೆ 26 ಕ್ಕೆ 4, ರೋನಿತ್​ ಮೋರೆ 16 ಕ್ಕೆ 2)

ಕರ್ನಾಟಕ: ಮೊದಲ ಇನಿಂಗ್ಸ್​ 84.2 ಓವರ್​ಗಳಲ್ಲಿ 186 ಕ್ಕೆ ಆಲೌಟ್​ (ಶ್ರೇಯಸ್​ ಗೋಪಾಲ್​ 40, ಡಿ. ನಿಶ್ಚಲ್ 39, ಬಚಾವ್​ 43 ಕ್ಕೆ 3, ಸಮದ್​ ಫಲ್ಲಾ 35 ಕ್ಕೆ 2)

ಮಹಾರಾಷ್ಟ್ರ: ಎರಡನೇ ಇನಿಂಗ್ಸ್​ 97 ಓವರ್​ಗಳಲ್ಲಿ 256 ಕ್ಕೆ ಆಲೌಟ್​ (ರುತುರಾಜ್​ ಗಾಯಕ್​ವಾಡ್​ 89, ನೌಷಾದ್​ ಶೇಕ್​ 73, ಸತ್ಯಜೀತ್​ ಬಚ್​ದೇವ್​ 28, ಶ್ರೇಯಸ್​ ಗೋಪಾಲ್​ 64 ಕ್ಕೆ 4, ಅಭಿಮನ್ಯು ಮಿಥುನ್​ 41 ಕ್ಕೆ 3)

ಕರ್ನಾಟಕ: ಎರಡನೇ ಇನಿಂಗ್ಸ್​ 34 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 54 (ದೇವದತ್ತ ಪಡಿಕಲ್​ 33*, ಡಿ. ನಿಶ್ಚಲ್​ 21*)

ಕರ್ನಾಟಕಕ್ಕೆ ಅಲ್ಪ ಮುನ್ನಡೆ

ರಾಜ್ಯದ ದಾಳಿಗೆ ಮಹಾ ಕುಸಿತ