ಮೂರನೇ ರಣಜಿ ಪಂದ್ಯ: ಮಹಾರಾಷ್ಟ್ರದ ವಿರುದ್ಧ ಕರ್ನಾಟಕದ ಮೇಲುಗೈ

ಮೈಸೂರು: ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ನಡೆಯುತ್ತಿರುವ 85ನೇ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 4ನೇ ಸುತ್ತಿನ ತನ್ನ 3ನೇ ಪಂದ್ಯದ ಮೊದಲ ದಿನದಾಟದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರದ ವಿರುದ್ಧ ಮೇಲುಗೈ ಸಾಧಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಮಹಾರಾಷ್ಟ್ರ ಕರ್ನಾಟಕದ ವೇಗದ ಬೌಲಿಂಗ್​ ದಾಳಿಗೆ ಸಿಲುಕಿ ಕೇವಲ 113ರನ್​ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್​ ಆರಂಭಿಸಿದ ಕರ್ನಾಟಕ ತಂಡದ ಮೊದಲ ದಿನದಾಟದಂತ್ಯಕ್ಕೆ 40 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 70 ರನ್​ ಗಳಿಸಿದೆ. ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲು ಇನ್ನೂ 43 ರನ್​ ಅವಶ್ಯಕತೆ ಇದೆ. ಕರ್ನಾಟಕ ಪರ ಡಿ. ನಿಶ್ಚಲ್ (32*) ಮತ್ತು ಜೆ. ಸುಚಿತ್ (2*) ರನ್​ ಗಳಿಸಿದ್ದು, ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ದಿನದಾಟದ ಆರಂಭದಲ್ಲಿ ಬ್ಯಾಟಿಂಗ್​ ಆರಂಭಿಸಿದ ಮಹಾರಾಷ್ಟ್ರ 39.4 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟಾಯಿತು. ಕರ್ನಾಟಕದ ಪರ ವಿನಯ್​ ಕುಮಾರ್​ (19 ಕ್ಕೆ 2), ಅಭಿಮನ್ಯು ಮಿಥುನ್​ (42 ಕ್ಕೆ 2), ರೋನಿತ್​ ಮೋರೆ (16 ಕ್ಕೆ 2) ಮತ್ತು ಸುಚಿತ್.ಜೆ (26 ಕ್ಕೆ 4) ವಿಕೆಟ್​ ಪಡೆದರು. ಮಹಾರಾಷ್ಟ್ರದ ಪರ ರುತುರಾಜ್ ಗಾಯಕ್ವಾಡ್ 39 ಮತ್ತು ರೋಹಿತ್ ಮೋಟ್ವಾನಿ 34 ರನ್​ ಗಳಿಸಿದರು.

ಸಂಕ್ಷಿಪ್ತ ಸ್ಕೋರ್​:

ಮಹಾರಾಷ್ಟ್ರ: ಮೊದಲ ಇನಿಂಗ್ಸ್​ 39.4 ಓವರ್​ಗಳಲ್ಲಿ 113 ಕ್ಕೆ ಆಲೌಟ್​ (ರುತುರಾಜ್ ಗಾಯಕ್ವಾಡ್ 39, ರೋಹಿತ್ ಮೋಟ್ವಾನಿ 34, ಸುಚಿತ್.ಜೆ 26 ಕ್ಕೆ 4, ರೋನಿತ್​ ಮೋರೆ 16 ಕ್ಕೆ 2)

ಕರ್ನಾಟಕ: ಮೊದಲ ಇನಿಂಗ್ಸ್​ 40 ಓವರ್​ಗಳಲ್ಲಿ 70 ಕ್ಕೆ 3 (ಡಿ. ನಿಶ್ಚಲ್ 32*, ಜೆ. ಸುಚಿತ್ 2*, ರಾಹುಲ್​ ತ್ರಿಪಾಠಿ 7 ಕ್ಕೆ 1)