ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

ಮೈಸೂರು: 85ನೇ ಆವೃತ್ತಿಯ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯ 3ನೇ ಪಂದ್ಯದಲ್ಲಿ ಪ್ರವಾಸಿ ಮಹಾರಾಷ್ಟ್ರ ತಂಡದ ವಿರುದ್ಧ ಕರ್ನಾಟಕ ತಂಡ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ.

ವಿದರ್ಭ ಮತ್ತು ಮುಂಬೈ ಎದುರಿನ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿ ತಲಾ ಮೂರು (ಒಟ್ಟು 6) ಅಂಕಪಡೆದು ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ತಂಡ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಆ ನಿರಾಸೆಯನ್ನು ದೂರ ಮಾಡಿತು. ಇದರೊಂದಿಗೆ ಟೂರ್ನಿಯ ‘ಎ’ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಡ್ರಾ, ಒಂದು ಗೆಲುವಿನೊಂದಿಗೆ 12 ಅಂಕ ಗಳಿಸಿತು.

54 ರನ್​ಗಳಿಂದ ಅಂತಿಮ ದಿನದಾಟ ಆಟ ಮುಂದುವರಿಸಿದ ಕರ್ನಾಟಕ ತಂಡ ಆರಂಭಿಕರಾದ ದೇವದತ್ ಪಡಿಕ್ಕಲ್(77ರನ್, 128 ಎಸೆತ, 11 ಬೌಂಡರಿ, 1 ಸಿಕ್ಸರ್), ಡಿ.ನಿಶ್ಚಲ್ (61ರನ್, 212 ಎಸೆತ, 4 ಬೌಂಡರಿ) ಜೋಡಿಯ ಸಂಯೋಜಿತ ಬ್ಯಾಟಿಂಗ್ ನೆರವಿನಿಂದ 70.2 ಓವರ್​ಗಳಲ್ಲಿ 3 ವಿಕೆಟ್​ಗೆ 184 ರನ್​ಗಳಿಸಿ ಗೆಲುವು ಪಡೆಯಿತು.

ಸಂಕ್ಷಿಪ್ತ ಸ್ಕೋರ್​:

ಮಹಾರಾಷ್ಟ್ರ: ಮೊದಲ ಇನಿಂಗ್ಸ್​ 39.4 ಓವರ್​ಗಳಲ್ಲಿ 113 ಕ್ಕೆ ಆಲೌಟ್​ (ರುತುರಾಜ್ ಗಾಯಕ್ವಾಡ್ 39, ರೋಹಿತ್ ಮೋಟ್ವಾನಿ 34, ಸುಚಿತ್.ಜೆ 26 ಕ್ಕೆ 4, ರೋನಿತ್​ ಮೋರೆ 16 ಕ್ಕೆ 2)

ಕರ್ನಾಟಕ: ಮೊದಲ ಇನಿಂಗ್ಸ್​ 84.2 ಓವರ್​ಗಳಲ್ಲಿ 186 ಕ್ಕೆ ಆಲೌಟ್​ (ಶ್ರೇಯಸ್​ ಗೋಪಾಲ್​ 40, ಡಿ. ನಿಶ್ಚಲ್ 39, ಬಚಾವ್​ 43 ಕ್ಕೆ 3, ಸಮದ್​ ಫಲ್ಲಾ 35 ಕ್ಕೆ 2)

ಮಹಾರಾಷ್ಟ್ರ: ಎರಡನೇ ಇನಿಂಗ್ಸ್​ 97 ಓವರ್​ಗಳಲ್ಲಿ 256 ಕ್ಕೆ ಆಲೌಟ್​ (ರುತುರಾಜ್​ ಗಾಯಕ್​ವಾಡ್​ 89, ನೌಷಾದ್​ ಶೇಕ್​ 73, ಸತ್ಯಜೀತ್​ ಬಚ್​ದೇವ್​ 28, ಶ್ರೇಯಸ್​ ಗೋಪಾಲ್​ 64 ಕ್ಕೆ 4, ಅಭಿಮನ್ಯು ಮಿಥುನ್​ 41 ಕ್ಕೆ 3)

ಕರ್ನಾಟಕ: ಎರಡನೇ ಇನಿಂಗ್ಸ್​ 70.2 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 184 (ದೇವದತ್ತ ಪಡಿಕಲ್​ 77, ಡಿ. ನಿಶ್ಚಲ್​ 61, ಕೌನೇನ್​ ಅಬ್ಬಾಸ್​ 34*)

ಜಯದ ಸನಿಹ ಕರ್ನಾಟಕ

ಕರ್ನಾಟಕಕ್ಕೆ ಅಲ್ಪ ಮುನ್ನಡೆ

ರಾಜ್ಯದ ದಾಳಿಗೆ ಮಹಾ ಕುಸಿತ