More

    ರಾಣಿ ಚನ್ನಮ್ಮ ವಿವಿಗೆ ಜಮೀನು ನೀಡಿಕೆ ಸ್ವಾಗತಾರ್ಹ

    ಬೆಳಗಾವಿ: ಸ್ವತಂತ್ರ ವಿಶ್ವವಿದ್ಯಾಲಯಕ್ಕಾಗಿ ಸುದೀರ್ಘ ಹೋರಾಟದ ಕಿಡಿ ಹೊತ್ತಿಸಿದ ಹಿರೇಬಾಗೇವಾಡಿಯ ರೈತರೇ ಖುದ್ದಾಗಿ ತಮ್ಮ ಸ್ವಂತ ಜಮೀನನ್ನು ವಿ.ವಿ.ಯ ಅಭಿವೃದ್ಧಿಗಾಗಿ ನೀಡಲು ಮುಂದೆ ಬಂದಿರುವುದು ಅತ್ಯಂತ ಸ್ವಾಗತಾರ್ಹ ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರಗೌಡ ಸಂತಸ ಹಂಚಿಕೊಂಡರು.

    ಕುಲಪತಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಉನ್ನತ ಶಿಕ್ಷಣದ ಅಭಿವೃದ್ಧಿ ನಿಂತ ನೀರಾಗಬಾರದು. ವಿಶ್ವ ವಿದ್ಯಾಲಯದ ಸ್ಥಾಪನೆಗಾಗಿ ಪಟ್ಟ ಪರಿಶ್ರಮ ವ್ಯರ್ಥವಾಗಬಾರದು ಎಂದು ಹೇಳಿದರು. ರಾಣಿ ಚನ್ನಮ್ಮ ವಿವಿ ಇದೀಗ ದಶಮಾನೋತ್ಸವ ಆಚರಿಸುವ ಹೊಸ್ತಿಲಲ್ಲಿದೆ. ವಿವಿಯ ಸಮಗ್ರ ಬೆಳವಣಿಗೆಗೆ ವಿಸ್ತಾರವಾದ ಜಾಗದ ಅವಶ್ಯಕತೆ ಇದೆ. ಆದರೆ, ಈಗಿರುವ ಭೂತರಾಮನಹಟ್ಟಿ ಭೂ ಪ್ರದೇಶವು ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಅಧೀನದಲ್ಲಿದ್ದು ವಿವಿಯ ಬೆಳವಣಿಗೆಗೆ ಅನುಮತಿ ಸಿಗಲು ಸಾಧ್ಯವೇ ಇಲ್ಲ ಎಂದರು.

    ಸಂವಾದದಲ್ಲಿ ಭಾಗವಹಿಸಿದ್ದ ರುದ್ರಗೌಡ ಪಾಟೀಲ, ವೈಜನಾಥ ಪಾಟೀಲ, ಯಲಗೌಡ ಪಾಟೀಲ, ಎ.ಬಿ. ಸಾಗರ, ಶಿವರಾಯಿ ವಾಲಿ, ಬಿ.ಎಸ್. ಗಾಣಿಗಿ, ಸಿದ್ಧಾರೂಢ ಹೊನ್ನನವರ ಇತರರು ಮಾತನಾಡಿ, ಜಮೀನಿಗೆ ಯೋಗ್ಯಬೆಲೆ ನೀಡುವುದು ಹಾಗೂ ವಿವಿಯಿಂದ ಈ ಭಾಗದಲ್ಲಿನ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಅವಕಾಶ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚಿಂತನೆ ನಡೆಸಿ ಸಮಗ್ರವಾದ ಮಾಹಿತಿ ಪಡೆದರು.

    ರಾಣಿ ಚನ್ನಮ್ಮ ವಿವಿ ಅಭಿವೃದ್ಧಿಪರ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ವಸ್ತ್ರದ, ಪಡಿಗೌಡ ವಾಲಿ, ಅಪ್ಪಯ್ಯ ವಾಲಿ, ಶಂಕರ ಸೋನಪ್ಪನವರ, ಭೀಮನಗೌಡ ಪೋಲೇಶಿ, ಬಾಯಪ್ಪ ಕಾದ್ರೋಳಿ, ಭೀಮನಗೌಡ ಪಾಟೀಲ, ಬಸನಗೌಡ ಬಾರಿಗಿಡದ, ಬಸವರಾಜ ರೊಟ್ಟಿ, ಅಡಿವೆಪ್ಪ ರೊಟ್ಟಿ, ಚಂಬಪ್ಪ ಪಾಶ್ಚಾಪುರ, ಮಹಾಂತೇಶ ಪಾಟೀಲ, ಪಡಿಗೌಡ ಅಂಕಲಗಿ, ಗ್ರಾಪಂ ಸದಸ್ಯರಾದ ಸಂಜಯ ದೇಸಾಯಿ, ಯಾಕೂಬ ದೇವಲಾಪುರ ಹಾಗೂ ಅನ್ವರ ದೇವಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts