More

    ವಿಜೃಂಭಣೆಯ ರಂಗನಾಥಸ್ವಾಮಿ ದೊಡ್ಡ ರಥೋತ್ಸವ

    ಅರಸೀಕೆರೆ: ತಾಲೂಕಿನ ಗುತ್ತಿನಕೆರೆ ಶ್ರೀ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

    ರಥೋತ್ಸವದ ಅಂಗವಾಗಿ ದೇಗುಲದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಮೂಡಲಗಿರಿ ತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ, ಹಾರ‌್ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರ ಸಮ್ಮುಖದಲ್ಲಿ ರಂಗನಾಥಸ್ವಾಮಿಯನ್ನು ಮೆರವಣಿಗೆ ಯಲ್ಲಿ ಕರೆತರಲಾಯಿತು.

    ಬಣ್ಣ ಬಣ್ಣದ ಬಟ್ಟೆ, ವಿಶೇಷ ಹೂಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಗೋವಿಂದನ ನಾಮಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಪಾನಕ ವಿತರಿಸಲಾಯಿತು.

    ರಥೋತ್ಸವ ಬಳಿಕ ವಸಂತೋತ್ಸವ, ಮಣೇವು ಸೇವೆ, ಮಹಾಮಂಗಳಾರತಿ ಜರುಗಿತು. ಸಂಜೆ ಗಂಗಾಸ್ನಾನದ ನಂತರ ಉಯ್ಯಲೆ ಉತ್ಸವ ನಡೆಯಿತು. ಹಾರನಳ್ಳಿ, ಬೆಲ್ವತ್ತಳ್ಳಿ, ಬಾಳೇನಳ್ಳಿ, ಯರೇಹಳ್ಳಿ, ವಿಠಲಾಪುರ, ದೊಡ್ಡೇನಳ್ಳಿ, ಹೆಬ್ಬಾರ‌್ನಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts