ರಂಗನ ಫಸ್ಟ್​ಲುಕ್

ಬೆಂಗಳೂರು: ‘ಚಮಕ್’, ‘ಅಯೋಗ್ಯ’ ಸಿನಿಮಾಗಳ ಖ್ಯಾತಿಯ ಕ್ರಿಸ್ಟಲ್ ಪಾರ್ಕ್ ಸಂಸ್ಥೆಯು ‘ಕೆಂಡಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್ ನಾಯಕತ್ವದಲ್ಲಿ ಹೊಸ ಚಿತ್ರವೊಂದನ್ನು ಘೋಷಣೆ ಮಾಡಿಕೊಂಡಿತ್ತು, ಅದಕ್ಕೆ ‘ರಂಗ ಬಿಇ, ಎಂಟೆಕ್’ ಎಂಬ ಶೀರ್ಷಿಕೆಯನ್ನೂ ಫೈನಲ್ ಮಾಡಿತ್ತು. ಇದೀಗ ಆ ಚಿತ್ರದ ಫಸ್ಟ್​ಲುಕ್ ಹೊರಬಿಟ್ಟಿದೆ. ಚಿತ್ರದಲ್ಲಿ ವಿಕ್ಕಿಗೆ ನಾಯಕಿಯಾಗಿ ಶಿಲ್ಪಾ ಮಂಜುನಾಥ್ ನಟಿಸಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಸಿನಿಮಾಕ್ಕೆ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ನಾಗೇಶ್. ಒಂದು ಕ್ಯೂಟ್ ಲವ್ ಸ್ಟೋರಿ ಜತೆಗೆ ಥ್ರಿಲ್ಲಿಂಗ್ ಅಂಶಗಳನ್ನು ಬೆಸೆದು ಚಿತ್ರಕಥೆ ಮಾಡಿರುವುದು ಈ ಸಿನಿಮಾ ವಿಶೇಷವಂತೆ. ಟಿ.ಆರ್. ಚಂದ್ರಶೇಖರ್ ನಿರ್ವಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಿಕೊಳ್ಳಲಿದೆ.