ಕಳ್ಳ ತಮ್ಮನಿಂದ ಕುಖ್ಯಾತ ಕಳ್ಳ ಅಣ್ಣನ ಕೊಲೆ; 2023ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಈಗ ಬೆಳಕಿಗೆ

ರಾಣೆಬೆನ್ನೂರ: ಒಂದೂವರೆ ವರ್ಷದ ಹಿಂದೆ ಕಳ್ಳ ತಮ್ಮ ತನ್ನ ಸ್ನೇಹಿತರ ಜತೆ ಸೇರಿ ಕುಖ್ಯಾತ ಕಳ್ಳನಾಗಿದ್ದ ಸ್ವತಂ ಅಣ್ಣನ ಕೊಲೆ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ತಂದು ಮಹಜರು ನಡೆಸಿದ ಬಳಿಕ ಇನ್ನಷ್ಟು ಸತ್ಯಾಂಶ ಬಯಲಿದೆ ಬರಲಿದೆ.
ಹಿರಿಯೂರಿನ ರಾಮು ಗುರುಪ್ರಸಾದ ನಾಗರಾಜ (35) ಕೊಲೆಯಾಗಿರುವ ಕುಖ್ಯಾತ ಕಳ್ಳ. ಈತನ ಸಹೋದರ ಪ್ರಸಾದ ಗುರುಪ್ರಸಾದ ನಾಗರಾಜ (32) ಹಾಗೂ ಸ್ನೇಹಿತ, ಜೈಲಲ್ಲಿ ನೌಕರಿ ಮಾಡುತ್ತಿದ್ದ ರಾಣೆಬೆನ್ನೂರ ನಿವಾಸಿ ಶ್ರೀಕಾಂತ ಮಾಲತೇಶ ಗುಡಗೂರ (30) ಕೊಲೆ ಮಾಡಿರುವ ಆರೋಪಿಗಳು. ಇವರ ವಿರುದ್ಧ ಕೊಲೆಯಾದ ರಾಮು ತಾಯಿ ಯಲ್ಲಮ್ಮ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಪ್ರಕರಣ…?
ಮೂವರು ಮನೆಗಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಕಳ್ಳತನ ಮಾಡಿಕೊಂಡು ಬಂದಾಗ ರಾಮು ಬೇರೆಯವರ ಬಳಿ ಹೇಳಿಕೊಳ್ಳುತ್ತಿದ್ದನಂತೆ. ಇದರಿಂದ ಕೋಪಕೊಂಡ ಸಹೋದರ ಪ್ರಸಾದ ಈ ರೀತಿ ಯಾರ ಬಳಿ ಹೇಳಬೇಡ ಎಂದು ತಾಕೀತು ಮಾಡುತ್ತ ಬಂದಿದ್ದ. ಆದರೆ, ರಾಮು ಬದಲಾಗಿರಲಿಲ್ಲ.
ಇದೇ ವಿಚಾರಕ್ಕೆ ರಾಣೆಬೆನ್ನೂರ ತಾಲೂಕಿನ ಹುಣಸಿಕಟ್ಟೆ ಗ್ರಾಮದ ಬಳಿ 2023 ಮೇ ತಿಂಗಳಲ್ಲಿ ಮನೆ ಕಳ್ಳತನಕ್ಕೆ ಬಂದಾಗ ರಾಮು ಮತ್ತು ಪ್ರಸಾದ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದರಿಂದ ಸ್ನೇಹಿತ ಶ್ರೀಕಾಂತ ಜತೆ ಸೇರಿ ಪ್ರಸಾದ ರಾಮುನನ್ನು ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೆ ಶವವನ್ನು ಗುಂಡಿ ತೋಡಿ ಮುಚ್ಚಿಹಾಕಿದ್ದರು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲೆ$್ಮಶ್ವರ ಪೊಲೀಸರ ಎದುರು ಬಾಯ್ಬಿಟ್ಟ ಕೊಲೆಗಡುಕರು…
ಕೊಲೆ ಮಾಡಿ ಆರಾಮವಾಗಿ ಮತ್ತೇ ಕಳ್ಳತನ ಚಾಳಿ ಮುಂದುವರಿಸಿದ್ದ ಪ್ರಸಾದ ಹಾಗೂ ಶ್ರೀಕಾಂತನನ್ನು ಲೆ$್ಮಶ್ವರ ಠಾಣೆ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಕಳೆದ ವಾರ ಬಂಧಿಸಿದ್ದರು. ಆಗ ನಿನ್ನ ಅಣ್ಣನ ಮೇಲೂ ಕೇಸ್​ ಇದ್ದು ಆತ ಎಲ್ಲಿ ಎಂದು ಬಾಯ್ಬಿಡಿಸಿದಾಗ ಪ್ರಸಾದ ತಾನೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್​ ಮೂಲದಿಂದ ತಿಳಿದಿದೆ.

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…