More

    ಉಪ ನೋಂದಣಿ ಕಚೇರಿಯಲ್ಲಿ ಕಾವೇರಿ-2.0 ತಂತ್ರಾಂಶ ಸೇವೆಗೆ ಚಾಲನೆ

    ರಾಣೆಬೆನ್ನೂರ: ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ನೀಡುವ ಉದ್ದೇಶದಿಂದ ಸರ್ಕಾರ ಕಾವೇರಿ-2.0 ಆನಲೈನ್ ತಂತ್ರಾಂಶ ಜಾರಿಗೊಳಿಸಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
    ನಗರದ ಉಪನೋಂದಣಿ ಕಚೇರಿಯಲ್ಲಿ ಬುಧವಾರ ಕಾವೇರಿ-2.0 ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಖರೀದಿ ಪತ್ರ ವಿತರಿಸಿ ಅವರು ಮಾತನಾಡಿದರು.
    ಈ ಮೊದಲು ನೋಂದಣಿ ಕಚೇರಿಯಲ್ಲಿ ಸೌಲಭ್ಯ ಪಡೆಯಲು ಬಹಳಷ್ಟು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಕಾವೇರಿ ತಂತ್ರಾಂಶ ಬಂದ ಪರಿಣಾಮ ಸಾರ್ವಜನಿಕರಿಗೆ ಬೇಗನೆ ತಮಗೆ ಬೇಕಾದ ದಾಖಲೆಗಳು ಲಭ್ಯವಾಗುತ್ತವೆ ಎಂದರು.
    ಜಿಲ್ಲಾ ನೋಂದಣಾಧಿಕಾರಿ ಮಹೇಶ ಪಂಡಿತ, ತಾಲೂಕು ಉಪನೋಂದಣಾಧಿಕಾರಿ ವಿಶ್ವನಾಥ ಸುಬೇದಾರ, ನೋಡಲ್ ಅಧಿಕಾರಿ ವಿನಯ ಕೀರ್ತಿ, ಹಿರೇಕೆರೂರ ಉಪನೋಂದಣಾಧಿಕಾರಿ ವಿಶ್ವನಾಥ ಜೆ.ಕೆ., ಎಫ್‌ಡಿಸಿ ವಿರೇಶ ಪೂಜಾರ, ಎಸ್‌ಡಿಸಿ ಮಂಜುನಾಥ ಗಳಗಿ, ಮುರಗೇಶ ಜಾಲಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts