More

    ಘನವೇಷಧಾರಿಗಳಿಂದ ಆಕರ್ಷಕ ಪಥಸಂಚಲನ; ರಂಗೋಲಿ ಬಿಡಿಸಿ, ಹೂವು ಹಾಕಿ ಸ್ವಾಗತಿಸಿದ ಜನತೆ

    ರಾಣೆಬೆನ್ನೂರ: ದಸರಾ ಹಬ್ಬದ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ನಗರದಲ್ಲಿ ಭಾನುವಾರ ಸಂಜೆ ಆಕರ್ಷಕ ಪಥಸಂಚಲನ ನಡೆಯಿತು.
    ನಗರದ ಮುನ್ಸಿಪಲ್ ಮೈದಾನದಿಂದ ಆರಂಭವಾದ ಪಥಸಂಚಲನ ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಗೌಳಿಗಲ್ಲಿ, ಸುಭಾಷ ಚೌಕ, ದೊಡ್ಡಪೇಟೆ, ಚಕ್ಕಮಕ್ಕಿ ದುರ್ಗಮ್ಮ ಸರ್ಕಲ್, ಎಂ.ಜಿ. ರಸ್ತೆ, ನೆಹರು ಮಾರ್ಕೇಟ್, ಶಂಕರ ಟಾಕೀಜ್ ಮಾರ್ಗವಾಗಿ ಪುನಃ ಮರಳಿ ಮುನ್ಸಿಪಲ್ ಮೈದಾನಕ್ಕೆ ಬಂದು ತಲುಪಿತು.
    ದಾರಿಯುದ್ದಕ್ಕೂ ಜನರು ರಸ್ತೆಗೆ ನೀರು ಸಿಂಪಡಿಸಿ ರಂಗೋಲಿ ಹಾಕಿ ಗಣವೇಷಧಾರಿಗಳ ಮೇಲೆ ಪುಷ್ಟವೃಷ್ಟಿ ಸುರಿಸುವ ಮೂಲಕ ಪಥಸಂಚಲನಕ್ಕೆ ಸ್ವಾಗತ ಕೋರಿದರು. ಕಂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿಬಣ್ಣದ ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು ಅತ್ಯಂತ ಶಿಸ್ತುಬದ್ಧ ಸಾಗುತ್ತಿದ್ದ ಸ್ವಯಂ ಸೇವಕರು ಎಲ್ಲರ ಗಮನ ಸೆಳೆದರು.
    ಪಥಸಂಚಲನ ಬಳಿಕ ಏರ್ಪಡಿಸಿದ್ದ ವೇದಿಕೆ ಸಮಾರಂಭದಲ್ಲಿ ಸಂಘದ ಉತ್ತರ ಕರ್ನಾಟಕ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೇರ ಮಾತನಾಡಿ, ಮುತ್ತು ರತ್ನಗಳನ್ನು ರಸ್ತೆ, ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದ ಭಾರತ ದೇಶದ ಎಂದಿಗೂ ವ್ಯಕ್ತಿಗತ ವಿಚಾರ ಮಾಡಿರಲಿಲ್ಲ. ವ್ಯಕ್ತಿಗತ ವಿಚಾರ ಮುನ್ನಲೆಗೆ ಬಂದ ಮೇಲೆ ದೇಶದಲ್ಲಿ ಪರಕೀಯರ ಆಕ್ರಮನ ನಡೆದವು.
    ಆದರೆ, ಇಂದಿಗೂ ಭಾರತ ದೇಶದಲ್ಲಿ 365 ದಿನಗಳು ಸದಾ ಒಂದಿಲ್ಲೊಂದು ವಿಶೇಷ ಜಾತ್ರೆ, ಹಬ್ಬಗಳ ಆಚರಣೆ ನಡೆಯುತ್ತಲೇ ಇರುತ್ತದೆ. ಅದೇ ದೇಶವನ್ನು ಸದೃಢ ಮಾಡುತ್ತದೆ. ಅಲ್ಲದೆ ಪರಸ್ಪರ ಬಾಂದವ್ಯ ಗಟ್ಟಿಯಾಗಿ ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದರು.
    ಕಂಬಳಿ ಮತ್ತು ಉಣ್ಣೆ ಸೊಸೈಟಿ ಮಾಜಿ ಅಧ್ಯಕ್ಷ ನಿಂಗಪ್ಪ ಗೌಡ್ರ, ಜಿಲ್ಲಾ ಸಂಘ ಚಾಲಕ ಈಶ್ವರ ಹಾವನೂರ, ಕೆ. ಶಿವಲಿಂಗಪ್ಪ, ಡಾ.ಬಸವಾರಜ ಕೇಲಗಾರ, ಶ್ರೀನಿವಾಸ ನಾಡಗೇರ, ಕೆ.ಎನ್. ಷಣ್ಮುಖ, ದೀಪಕ ಹರಪನಹಳ್ಳಿ, ರಾಮಕೃಷ್ಣ ತಾಂಬೆ, ಎ.ಬಿ. ಪಾಟೀಲ, ರಾಜೇಂದ್ರ ಬಾಕಳೆ, ಅನಿಲ ಸಿದ್ದಾಳಿ, ಶಿವಕುಮಾರ ಹರ್ಕನಾಳ, ಸುನೀಲ ಮಿಸ್ಕಿನ್, ಭೋಜರಾಜ ಧಲಬಂಜನ, ದತ್ತಾತ್ರೇಯ ರೇವಣಕರ ಮತ್ತಿತರರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts