ರಾಣೆಬೆನ್ನೂರ ನಗರ ದೇವತೆ ಚೌಡೇಶ್ವರಿ ಜಾತ್ರೆ ಇಂದಿನಿಂದ

blank

ರಾಣೆಬೆನ್ನೂರ: ಹೂವಿನ ಹರಕೆ ಹೊತ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತ ಹೂವಿನ ಚೌಡಮ್ಮ ಎಂದೇ ಪ್ರಸಿದ್ಧಿ ಪಡೆದ ವಾಣಿಜ್ಯ ನಗರಿ ರಾಣೆಬೆನ್ನೂರಿನ ನಗರ ದೇವತೆ ಗಂಗಾಜಲ ಶ್ರೀ ಚೌಡೇಶ್ವರಿ ಹಾಗೂ ತುಂಗಾಜಲ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವವು ಜ. 13ರಿಂದ ನಡೆಯಲಿದ್ದು, ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ.
ಬನದ ಹುಣ್ಣಿಮೆ ದಿನದಂದು ಜಾತ್ರಾಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಚೌಡೇಶ್ವರಿ ನಗರದಲ್ಲಿ ಈಗಾಗಲೇ ಸಂಭ್ರಮ ಸಗಡರ ಮನೆ ಮಾಡಿದೆ. ದೇವಸ್ಥಾನ ಸುಣ್ಣ&ಬಣ್ಣಗಳಿಂದ ಕಂಗೊಳಿಸತೊಡಗಿದೆ. ಮೇಡ್ಲೇರಿ ವೃತ್ತದಿಂದ ಚೌಡೇಶ್ವರಿ ದೇವಸ್ಥಾನದ ವರೆಗೂ ವಿದ್ಯುತ್​ ದ್ವೀಪಗಳು ಹಾಗೂ ಬೀದಿಗಳಲ್ಲಿ ರಂಗುರಂಗಿನ ವಸಾಭರಣಗಳಿಂದ ನಿಮಿರ್ಸಿದ ಮಂಟಪ ಭಕ್ತರನ್ನು ಸ್ವಾಗತಿಸಲು ಸಿದ್ಧಗೊಳುತ್ತಿವೆ.
ವಿವಿಧ ಧಾಮಿರ್ಕ ಕಾರ್ಯಕ್ರಮಗಳು…
ಜ. 13ರಂದು ಸಂಜೆ 6 ಗಂಟೆಗೆ ಚೌಡೇಶ್ವರಿ ದೇವಿಯ ಮೂತಿರ್ ಉತ್ಸವವು ಶ್ರೀದೇವಿ ಮನೆಯಿಂದ ಅಂಬಾರಿ ಮೆರವಣಿಗೆ ಮೂಲಕ ಹೊರಟು ಡೊಳ್ಳು ಕುಣಿತ, ಕೋಲಾಟಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, 14ರಂದು ಬೆಳಗ್ಗೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಶೃಂಗರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಅಂದು ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪೂಜಾ ನೈವಿಧ್ಯ, ಹರಿಕೆ ಸಲ್ಲಿಸುವುದು ಸೇರಿ ವಿವಿಧ ಧಾಮಿರ್ಕ ಕಾರ್ಯಕ್ರಮ ನಡೆಯಲಿವೆ.
ಜ. 16ರಂದು ಬೆಳಗ್ಗೆ ಓಕಳಿ ಉತ್ಸವ, ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ, ರಾತ್ರಿ ಭಜನೆ ಸೇರಿ 5 ದಿನಗಳ ಕಾಲ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ತುಂಗಾಜಲ ಹಾಗೂ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.
ಸೂಕ್ತ ಪೊಲೀಸ್​ ಬಂದೋಬಸ್ತ್​…
5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಯಾವುದೆ ಅಹಿತಕರ ಟನೆಗಳು ನಡೆಯದಂತೆ ಸೂಕ್ಷ$್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಔಟ್​ ಫೋಸ್ಟ್​ ತೆರೆಯಲಿದ್ದು, ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…