ಪರೋಪಕಾರ ನೆಚ್ಚಿ ಬದುಬೇಕು; ಒಡೆಯರ ಮಲ್ಲಿಕಾರ್ಜುನ ಸ್ವಾಮೀಜಿ

blank

ರಾಣೆಬೆನ್ನೂರ: ಗುರುಗಳ ಆಶಯವನ್ನು ಅರ್ಥೈಸಿಕೊಂಡು ಬದುಕುವುದು ಶಿಷ್ಯನ ಕರ್ತವ್ಯ. ದೀಪಕ್ಕೆ ಬಳಸುವ ಬತ್ತಿ, ಎಣ್ಣೆ, ಪಣತೆ ಎಲ್ಲವೂ ಪ್ರಕೃತಿಯದ್ದು. -ಇವೆಲ್ಲವುಗಳನ್ನು ಬಳಸಿಕೊಳ್ಳುವ ನಾವು ಪರೋಪಕಾರವನ್ನು ನೆಚ್ಚಿ ಬದುಕಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಪಂಡಿತಾರಾಧ್ಯ ವಾಗೀಶ ಸಮುದಾಯ ಭವನದಲ್ಲಿ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸತಿ ಪ್ರಸಾರ ಪರಿಷತ್​ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ಜ್ಞಾನ ವಾಹಿನಿ ಮಾಸಿಕ ಹುಣ್ಣಿಮೆ ಹಾಗೂ ಕಾತಿರ್ಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕಾತಿರ್ಕ ದೀಪೋತ್ಸವ ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ವಿ. ಕೋರಿ ವಿಶೇಷ ಉಪನ್ಯಾಸ ನೀಡಿದರು. ಹೊನ್ನಾಳಿ ಪುರಸಭೆಯ ಸದಸ್ಯ ಚನ್ನಕಿರಣ ಪ್ರಶಸ್ತಿ ಪುರಸತ ಸುರೇಶ ಹೊಸಕೆರೆ ಅವರನ್ನು ಸನ್ಮಾನಿಸಲಾಯಿತು.
ಮಂಜುಳಾ ವೀರನಗೌಡ, ಚೆನ್ನವಿರಗೌಡ ಪಾಟೀಲ ಮತ್ತು ಕಟು ಹಸಾದ ಸೇವೆ ಸಲ್ಲಿಸಿದರು. ಕಲಾವಿದರಾದ ರಜನಿ ಕರಿಗಾರ,
ಯುವರಾಜ ಸೋಮನಾಥ ಹಿರೇಮಠ ಮತ್ತು ಎಸ್​.ಎಂ. ಕರಿಗಾರ ಅವರು ಸಂಗೀತ ಸೇವೆ ಸಲ್ಲಿಸಿದರು.
ಪ್ರಮುಖರಾದ ಅಮೃತಗೌಡ ಹಿರೇಮಠ, ಬಿದ್ದಾಡಪ್ಪ ಚಕ್ರಸಾಲಿ, ಪ್ರಭಾಕರ ಶಿಗ್ಲಿ, ಮೃತ್ಯುಂಜಯ ಪಾಟೀಲ, ಗೌರಿಶಂಕರ ನೆರಗಳೂರಮಠ, ಲಲಿತಮ್ಮ ಹರನಗಿರಿ, ಗಾಯತ್ರಿ ಕುರುವತ್ತಿ, ಸುನಂದಮ್ಮ ತಿಳುವಲ್ಲಿ, ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article

ಈ 3 ರಾಶಿಯ ಪುರುಷರು ಪ್ರೀತಿಗೋಸ್ಕರ ತಮ್ಮ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ! ನಿಮ್ಮದು ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha

Astrology Tips: ರುದ್ರಾಕ್ಷಿ ಎಂಬ ಪದ ಕೇಳಿದೊಡನೆ ನಮ್ಮಲ್ಲಿ ಭಕ್ತಿ ಭವಾನೆ ಮೂಡುತ್ತದೆ. ರುದ್ರಾಕ್ಷಿಗಳಿಂದ (Rudraksha)…

ಬೇಸಿಗೆಯಲ್ಲಿ ಈ ಜ್ಯೂಸ್​ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer

summer:  ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …