ರಾಣೆಬೆನ್ನೂರ: ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿ ಸೋಲು ಅನುಭವಿಸಬೇಕಾಯಿತು. ಇದಕ್ಕೆ ಕಾರ್ಯಕರ್ತರು ಯಾವುದಕ್ಕೂ ದೃತಿಗೆಡದೆ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸೋಣ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪಕ್ಷದ ವತಿಯಿಂದ ಏರ್ಪಡಿಸಿದ್ದ ಆತ್ಮವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಈ ಸೋಲಿಗೆ ಯಾರು ಕೂಡ ಹೆದರುವ ಪ್ರಶ್ನೆಯಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಹಳಷ್ಟು ಬಲ್ಯಾಡವಾಗಿದ್ದು ಕಾರ್ಯಕರ್ತರ, ಮುಖಂಡರು ಮುಂದಿನ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷವನ್ನು ಮತ್ತಷ್ಟು ಸಂಘಟಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರೋಣ ಎಂದರು.
ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿ ಪಕ್ಷ ಸಂಘಟನೆ ಜತೆಗೆ ಕಾರ್ಯಕರ್ತರ ರಕ್ಷಣೆ ಸದಾ ಸಿದ್ಧನಾಗಿರುತ್ತೇವೆ. ಅವರಿಗೆ ದೈರ್ಯ ತುಂಬುವ ಕೆಲಸ ಮಾಡಲಾಗುವುದು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಯಾವುದೇ ಮುಲಾಜಿಗೆ ಒಳಗಾಗದೆ ಪಕ್ಷದಿಂದ ಉಚ್ಛಾಟನೆ ಮಾಡಿ ನಿಜವಾದ ಕಾರ್ಯಕರ್ತರ ಪರಿಶ್ರಮಕ್ಕೆ ದಕ್ಕೆಬಾರದಂತೆ ನಡೆದುಕೊಂಡು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು. ಈ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ಸರಿಪಡಿಸಿಕೊಂಡು ಮುಂದಿನ ಕಾರ್ಯಕರ್ತರ ಚುನಾವಣೆಯ ಮಾಡೋಣ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಹಿಂದು ಪರ ಸಂಘಟನೆ ಕಾರ್ಯಕರ್ತರ ಮೇಲೆ ಅನ್ಯ ಪಕ್ಷದವರು ಹಾಗೂ ಯಾರೇಯಾಗಲಿ ದೌರ್ಜನ್ಯಕ್ಕೆ ಮುಂದಾದರೆ ಅವರ ಜತೆ ನಿಂತು ಅವರ ಪರ ಧ್ವನಿ ಎತ್ತುವ ಮೂಲಕ ಹೋರಾಟಕ್ಕೆ ಇಳಿದು ಅವರನ್ನು ರಕ್ಷಿಸಲಾಗುವುದು. ಈ ನಿಟ್ಟಿನಲ್ಲಿ ಮತ್ತೆ ಪಕ್ಷ ಕಟೋಣ, ಮತ್ತೆ ಗೆಲ್ಲೋಣ ಯಾರು ಕೂಡ ದೃತಿಗೆಡದೆ ಮತ್ತೆ ಸಂಘಟನೆ ಮಾಡೋಣ ಎಂದರು.
ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗೋಣ: ಅರುಣಕುಮಾರ ಪೂಜಾರ

You Might Also Like
ಇಂಟರ್ನೆಟ್ ಆಫ್ ಮಾಡದೇ ದಿಂಬಿನಡಿ ಮೊಬೈಲಿಟ್ಟು ಮಲಗ್ತೀರಾ? ಹುಷಾರ್! ಇದರಿಂದಾಗೋ ಹಾನಿ ಬಗ್ಗೆ ತಿಳಿಯಿರಿ | Mobile Internet
Mobile Internet:ಇಂದಿನ ಅತ್ಯಾಧುನಿಕ ಯುಗದಲ್ಲಿ ಮೊಬೈಲ್ ಫೋನ್ ಜೀವನದ ಅಂಗವಾಗಿಬಿಟ್ಟಿದೆ. ನಾವು ಅದರಲ್ಲಿ ಎಷ್ಟು ಮಗ್ನರಾಗಿದ್ದೇವೆ…
ಮಹಾ ಶಿವರಾತ್ರಿಯಂದು ಬುಧ ಸಂಕ್ರಮಣ: ಈ 5 ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs
Zodiac Signs : ಮಹಾ ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಫೆಬ್ರವರಿ 26 ರಂದು ಮಹಾ ಶಿವನ…
ನಿದ್ರೆಯಿಂದ ಕ್ಯಾನ್ಸರ್ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes
Grapes : ಪ್ರತಿದಿನ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.…